ಹಳೆಯಂಗಡಿ: ಕನ್ನಡ ಚಿಂತನ ವೇದಿಕೆ

ಹಳೆಯಂಗಡಿ: ಕನಕದಾಸರು ತಮ್ಮ ದಾಸವಾಣಿಯ ಮೂಲಕ ಬದುಕಿನ ಮೌಲ್ಯಗಳನ್ನು ಎಲ್ಲರೂ ತಿಳಿಯುವಂತೆ ಬಹಳ ಸರಳವಾಗಿ ನಿರೂಪಿಸಿದ್ದಾರೆ ಎಂದು ಹಿರಿಯ ಸಂಶೋಧಕ ಡಾ.ಎಂ. ಪ್ರಭಾಕರ ಜೋಶಿ ಹೇಳಿದರು.
ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಚಿಂತನ ವೇದಿಕೆಯ ಸಂಯೋಜನೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಕನಕ ಚಿಂತನ ತತ್ವ ಉಪನ್ಯಾಸ ಮಾಲಿಕೆ 2016-17 ನಡೆದ ಕನಕ ಚಿಂತನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕನಕದಾಸರ ಪದ್ಯಗಳು ಗ್ರಾಮೀಣ ಬದುಕಿನ ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆ ,ಮೌಡ್ಯಗಳ ನಿವಾರಣೆ, ಒತ್ತಡದ ಬದುಕಿನಿಂದ ಶಾಂತಿ ಸಮಾಧಾನಗಳನ್ನು ಹುಡುಕುವ ಬಗ್ಗೆ ಬಹಳ ಸರಳವಾಗಿ ತಿಳಿಸಲಾಗಿದೆ. ಬದುಕಿಗೆ ಪೂರಕವಾದ ತತ್ವಜ್ಞಾನವನ್ನು ಆದ್ಯಾತ್ಮಕ ಹಿನ್ನಲೆಯಲ್ಲಿ ಕನಕದಾಸರು ಬಹಳ ಸರಳವಾಗಿ ತಿಳಿಸಿದ್ದಾರೆ ಯುವ ವಿದ್ಯಾರ್ಥಿಗಳು ಕನಕ ಚಿಂತನೆಯನ್ನು ಓದಿ ಅರ್ಥೈಸಿದರೆ ಬದುಕಿನ ಸೂಕ್ಷ್ಮತೆಗಳ ಅರಿವು ಗಳಿಸಲು ಸುಲಭ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ. ವಿಶ್ವನಾಥ ಭಟ್ ವಹಿಸಿದ್ದರು. ಅತಿಥಿಗಳಾಗಿ ಕನಕದಾಸ ಸಂಶೋಧನಾ ಕೇಂದ್ರದ ಡಾ. ಬಿ.ಶಿವರಾಮ ಶೆಟ್ಟಿ, ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಪ್ರಸನ್ನ ಪಿಬಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಜ್ಞಾ ಸ್ವಾಗತಿಸಿದರು.ರೇಶ್ಮಾ ನಿರೂಪಿಸಿದರು.ಅಂಕಿತಾ ವಂದಿಸಿದರು.

Kinnigoli-06031703

Comments

comments

Comments are closed.

Read previous post:
Kinnigoli040317012
ಮಕ್ಕಳ ಹಕ್ಕು ಹಾಗೂ ಕಾಳಜಿ ಬಗ್ಗೆ ಕಾರ್ಯಗಾರ

ಕಿನ್ನಿಗೋಳಿ: ಸಂಸ್ಕಾರಭರಿತ, ಮಾನವೀಯ ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ಎಳವೆಯಲ್ಲಿ ನೀಡಿದಾಗ ಭವಿಷ್ಯದಲ್ಲಿ ಸತ್ಪ್ರ್ರಜೆಯಾಗಲು ಸಾಧ್ಯ ಎಂದು ಉಡುಪಿ ಮಕ್ಕಳು ಕಲ್ಯಾಣ ಸಮಿತಿ ಸದಸ್ಯೆ ಭಗಿನಿ ಲಿಲ್ಲಿ ಹೇಳಿದರು. ಕಿನ್ನಿಗೋಳಿ...

Close