ಪ್ಲಾಸ್ಟಿಕ್ ಮುಕ್ತ ಗ್ರಾಮ, ಘನ ತ್ಯಾಜ್ಯ ಮಾಹಿತಿ

ಕಿನ್ನಿಗೋಳಿ: ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡಲು ಯುವಜನರು ಸ್ವಯಂ ಸ್ಪೂರ್ತಿಯಿಂದ ಪ್ರಯತ್ನಿಸಿ ಸ್ವಚ್ಚಭಾರತದ ಕನಸು ನನಸಾಗಿಸಬೇಕು ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಎಂದು ಹೇಳಿದರು
ಮಂಗಳೂರು ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ತಪೋವನದ ಎನ್.ಎಸ್.ಎಸ್. ಘಟಕ, ರೋವರ್ಸ್ ಘಟಕ ಮತ್ತು ಪಡಪಣಂಬೂರು ಗ್ರಾಮ ಪಂಚಾಯಿತಿಯ ಜಂಟೀ ಆಶ್ರಯದಲ್ಲಿ ಶನಿವಾರ ನಡೆದ ಭಾರತ ಸರಕಾರದ ಸ್ಚಚ್ಚ ಭಾರತ್ ಅಭಿಯಾನದಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಮತ್ತು ಘನ ತ್ಯಾಜ್ಯ ನಿರ್ವಹಣೆ ಕಾರ್ಯಾಗಾರ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪಂಚಾಯಿತಿ ಕಾರ್ಯದರ್ಶಿ ಲೋಕನಾಥ ಭಂಡಾರಿ ಅವರು ಘನತ್ಯಾಜ್ಯ ನಿರ್ವಹಣೆ ಹಾಗು ಕೃತಕ ಗೊಬ್ಬರ ತಯಾರಿ, ಫೈರ್ ಮತ್ತು ಸೇಫ್ಟಿ ಅಧಿಕಾರಿ ನಿತಿನ್ ವಾಸ್ ಮಾಹಿತಿಗಳನ್ನು ನೀಡಿದರು.
ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಿನ್ಸಿಪಾಲ್ ವೈ.ಎನ್. ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಪಡುಪಣಮಬೂರು ಗ್ರಾಮ ಪಂಚಾಯಿತಿ ಸದಸ್ಯೆಯರಾದ ಲೀಲಾ ಬಂಜನ್, ಪುಷ್ಪಲತಾ, ತರಬೇತಿ ಅಧಿಕಾರಿ ರಘುರಾಮ್ ರಾವ್, ಕಛೇರಿ ಅಧೀಕ್ಷಕ ಸಂಜೀವ ದೇವಾಡಿಗ ಉಪಸ್ಥಿತರಿದ್ದರು.
ಹರಿ ಎಚ್. ಸ್ವಾಗತಿಸಿ ಸುರೇಶ್ ಎಸ್. ವಂದಿಸಿದರು. ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli06031702

Comments

comments

Comments are closed.

Read previous post:
Kinnigoli06031701
ಹಳೆಯಂಗಡಿ ಕದಿಕೆ ಉರೂಸ್

ಕಿನ್ನಿಗೋಳಿ : ಸರಕಾರದ ವಿದ್ಯಾಸಿರಿ ಯೋಜನೆಯಲ್ಲಿ ಸುಮಾರು ೪೦ ಸಾವಿರ ಅಲ್ಪಸಂಖ್ಯಾತ ಫಲಾನುಭಾವಿಗಳಿಗೆ ಧನ ಸಹಾಯ ನೀಡಲಾಗುತ್ತದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು....

Close