ತಾಂತ್ರಿಕ ಶಿಕ್ಷಣದಲ್ಲಿ ಹೊಸತನ ಬಳಸಬೇಕು

ಕಿನ್ನಿಗೋಳಿ: ತಾಂತ್ರಿಕ ಶಿಕ್ಷಣದಲ್ಲಿ ಹೊಸತನ ನೈಪುಣ್ಯತೆಯನ್ನು ಬಳಸಿ ಉತ್ತಮ ಸಾಧನೆ ಮಾಡಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ, ಮತ್ತು ಕೈಕಂಬ ಕೆಐಸಿಟಿ ಮತ್ತು ಎಂಸಿಟಿಸಿ ( ತಾಂತ್ರಿಕ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ) ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಹರ್ಷದ್ ಎಂ. ಎ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಕ್ರಾಂತಿಯ ಹರಿಕಾರ ಅಕ್ಷರ ಸಂತ ಹರೇಕಳ ಹಾಜಬ್ಬ , ಕಿನ್ನಿಗೊಳಿ ಗ್ರಾ. ಪಂ. ಪೌರ ಕಾರ್ಮಿಕ ಬೊಗ್ಗಣ್ಣ, ಕಿನ್ನಿಗೋಳಿ ಅಂಚೆ ಇಲಾಖೆಯ ಎಲಿಯಾಸ್ ಡಿಸೋಜ, ಕಿನ್ನಿಗೋಳಿ ರುದ್ರಭೂಮಿ ನಿರ್ವಾಹಕ ಮಾದವ ಶೆಟ್ಟಿ , ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಎಕ್ಸ್‌ರೇ ಟೆಕ್ನೀಶಿಯನ್ ಲಿಯೋ ಲೂವಿಸ್, ಹಿರಿಯ ಆಟೋ ಚಾಲಕ ಭಾಸ್ಕರ ಶೆಟ್ಟಿ , ಬಹುಮುಖ ಪ್ರತಿಭೆ ಅನುಜ್ಞಾ ಭಟ್, ಅಂತರಾಷ್ಟ್ರೀಯ ಪವರ್ ಲಿಪ್ಟರ್ ಪ್ರದೀಪ್ ಕುಮಾರ್, ಪತ್ರಕರ್ತ ಇರ್ಶಾದ್ ಕಿನ್ನಿಗೋಳಿ, ದಾಯ್ಜಿ ವರ್ಲ್ಡ್ ಜೂನಿಯರ್ ಮಸ್ತಿ ಪ್ರಶಸ್ತಿ ವಿಜೇತೆ ನಮನ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು
ಸಂಸ್ಥೆಯ ಅರ್ಥಿಕ ಹಿಂದುಳಿದ ವಿದ್ಯಾರ್ಥಿಗಳಾದ ಸಂದೇಶ್, ಮಹಮ್ಮದ್ ಬಶೀರ್, ರಂಜನ ಸಿಕ್ವೇರಾ, ನಿರ್ಮಲಾ, ಪ್ರವೀಣ್ ಶೆಟ್ಟಿ , ದಾಕ್ಷಾಯಣಿ, ರುಫಿಯಾ, ಕಾಮಾಕ್ಷಿ, ಬಬಿತಾ, ನಿರ್ಮಲಾಕ್ಷಿ ಅವರಿಗೆ ಸಂರ್ಪೂಣ ಉಚಿತ ವಿದ್ಯಾಭ್ಯಾಸದ ಸರ್ಟಿಫಿಕೇಟ್ ನೀಡಲಾಯಿತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಕಿನ್ನಿಗೊಳಿ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ಲತೀಫ್ ಸಖಾಫಿ, ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ. ಫಾ. ವಿನ್ಸೆಂಟ್ ಎಫ್ ಮೊಂತೇರೊ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಐಕಳ ಪೊಂಪೈ ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಜಗದೀಶ ಹೊಳ್ಳ, ಕೆಐಸಿಟಿ ಮತ್ತು ಎಂಸಿಟಿಸಿ ಪ್ರಿನ್ಸಿಪಾಲ್ ನವೀನ್ ವೈ ಉಪಸ್ಥಿತರಿದ್ದರು.
ಸಂಸ್ಥೆಯ ಮಾರ್ಗದರ್ಶಕರಾಗಿದ್ದ ಮರ್‌ಹೂಮ್ ಮುಲ್ಕಿ ಎಂ. ಎಚ್ ಅಬ್ಬಾಸ್ ಹಾಗೂ ದಿ. ವೈ. ಕಿಟ್ಟ ಕರ್ಕೇರ ಅವರಿಗೆ ನುಡಿ ನಮನ ನಡೆಯಿತು.
ಸಂಸ್ಥೆಯ ಶಿಕ್ಷಕಿ ಸುರೇಖಾ ಸ್ವಾಗತಿಸಿದರು. ಪ್ರತಿಮಾ ಪ್ರತಿಭಾ ಪುರಸ್ಕಾರದ ವಿವರ ನೀಡಿದರು. ಸುರೇಖಾ ವಂದಿಸಿದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

Kinnigoli07031702

Comments

comments

Comments are closed.

Read previous post:
Kinnigoli07031701
ಬೆಳ್ಳಿಯ ಹೊದಿಕೆ ಮೆರವಣಿಗೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಮಾಗಣೆ ಶ್ರೀ ಕೋರ‍್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವದಂದು ಕೋರ‍್ದಬ್ಬು ಮತ್ತು ಧೂಮಾವತಿ ಬಂಟ ದೈವಕ್ಕೆ ಭಕ್ತರ ಸೇವಾ ರೂಪವಾಗಿ ಶ್ರೀ ದೈವಕ್ಕೆ ಪಲ್ಲಕಿ...

Close