ಅರಸು ಕುಂಜರಾಯ ದೇವಸ್ಥಾನ ವಾರ್ಷಿಕ ನೇಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ಮಾರ್ಚ್ 8ರಿಂದ ಮಾರ್ಚ್ 11ರ ತನಕ ವರ್ಷಾವಧಿ ನೇಮ ನಡೆಯಲಿದೆ ಎಂದು ದೈವಸ್ಥಾನ ಸಮಿತಿ ಅಧ್ಯಕ್ಷ ದೇವೀಪ್ರಸಾದ ಶೆಟ್ಟಿ ತಿಳಿಸಿದ್ದಾರೆ.
ಮಾರ್ಚ್ 8ರಂದು ಧ್ವಜಾರೋಹಣ, ಕುಂಜರಾಯ ದೈವದ ನೇಮೋತ್ಸವ, ಸ್ಟಾರ್ ಮೆಲೋಡಿಯಸ್ ಅವರಿಂದ ಭಕ್ತಿಗೀತೆ ರಸಮಂಜರಿ. ಮಾರ್ಚ್ 9ರಂದು ಉಳ್ಳಾಯ, ಕೊಡಮಣಿತ್ತಾಯ, ಕಾಂತೇರಿ ಧೂಮಾವತಿ, ಅಡ್ಯಂತಾಯ, ಬಬ್ಬರ್ಯ್ಯ ದೈವಗಳ ನೇಮ, ಎಡನೀರು ಮೇಳದವರಿಂದ ಯಕ್ಷಗಾನ, ಲಕ್ಷ್ಮೀನಾರಾಯಣ ಆಸ್ರಣ್ಣರ ಉಪಸ್ಥಿತಿಯಲ್ಲಿ ಸೀತಾರಾಮ ಕುಮಾರ್ ಅವರಿಗೆ ಸನ್ಮಾನ. ಮಾರ್ಚ್ 10ರಂದು ಜಾರಂದಾಯ ಬಂಟ ನೇಮ, ಕೋರ‍್ದಬ್ಬು ಜಾರಂದಾಯ ದೈವಗಳ ಭೇಟಿ, ಸರಳ ಧೂಮಾವತಿ, ಪಿಲಿಚಂಡಿ ನೇಮ, ಸಾಧಕರಿಗೆ ಸನ್ಮಾನ, ವಿಹಿಂಪದ ಸಂಘಟನಾ ಕಾರ್ಯದರ್ಶಿ ಗೋಪಾಲ್‌ಜಿ ಅವರಿಂದ ಉಪನ್ಯಾಸ, ಉಲ್ಲಂಜೆ ಯುವಶಕ್ತಿ ತಂಡದಿಂದ ಪಿರಬನ್ನಗ ನಾಟಕ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli07031702
ತಾಂತ್ರಿಕ ಶಿಕ್ಷಣದಲ್ಲಿ ಹೊಸತನ ಬಳಸಬೇಕು

ಕಿನ್ನಿಗೋಳಿ: ತಾಂತ್ರಿಕ ಶಿಕ್ಷಣದಲ್ಲಿ ಹೊಸತನ ನೈಪುಣ್ಯತೆಯನ್ನು ಬಳಸಿ ಉತ್ತಮ ಸಾಧನೆ ಮಾಡಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಶನಿವಾರ...

Close