ಕಾಂಕ್ರೀಟೀಕರಣ ರಸ್ತೆ ಲೋಕಾರ್ಪಣೆ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಮಣ್ಯ ಮಹಾಗಣಪತಿ ದೇವಳದ ಬಳಿಯ ರಸ್ತೆಯನ್ನು ದ.ಕ. ಜಿಲ್ಲಾ ಪಂಚಾಯಿತಿ ಮತ್ತು ಮಂಗಳೂರು ತಾಲೂಕು ಪಂಚಾಯಿತಿಯ ಜಂಟಿ ಅನುದಾನದಲ್ಲಿ 5.65 ಲಕ್ಷ ರೂ ವೆಚ್ಚದ ಕಾಂಕ್ರೀಟೀಕರಣ ರಸ್ತೆಯನ್ನು ಮಹಿಳಾ ದಿನಾಚರಣೆಯ ಪರವಾಗಿ ಸ್ಥಳೀಯ ಹಿರಿಯ ಮಹಿಳೆ ಸುಶೀಲಾ ಭಂಡಾರಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಪಡುಪಣಂಬೂರು ಗ್ರಾಮ ಪಂ ಅಧ್ಯಕ್ಷ ಮೋಹನದಾಸ್ ತೋಕೂರು, ಉಪಾಧ್ಯಕ್ಷೆ ಸುರೇಖ, ಸದಸ್ಯರಾದ ಹೇಮಂತ್ ಅಮೀನ್, ಹರಿಪ್ರಸಾದ್, ಬಿಜೆಪಿ ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮಹಾಬಲ ಭಂಡಾರಿ, ರತ್ನಾ ಭಂಡಾರಿ, ಸುಂದರ ಭಂಡಾರಿ, ಈಶ್ವರ, ಗೋಪಾಲ ಅಂಚನ್, ಸುಬ್ರಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli08031702

Comments

comments

Comments are closed.

Read previous post:
Kinnigoli08031701
ಮಹಿಳೆಯರು ಸುಶಿಕ್ಷಿತರಾದಾಗ ಸಮಾಜದ ಅಭಿವೃದ್ಧಿ

ಕಿನ್ನಿಗೋಳಿ: ಮಹಿಳೆಯರು ಜಾಗೃತರಾಗಿ ಸುಶಿಕ್ಷಿತರಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿದಾಗ ಸಮಾಜ ಅಭಿವೃದ್ಧಿ ಹೊಂದುತ್ತದೆ. ಎಂದು ಯೂನಿಯನ್ ಬ್ಯಾಂಕ್ ನಿವೃತ್ತ ಪ್ರಭಂದಕಿ ಜೆಸಿಂತಾ ಮಥಾಯಸ್ ಹೇಳಿದರು. ದ.ಕ. ಜಿಲ್ಲಾ...

Close