ಕಿನ್ನಿಗೋಳಿ ಗ್ರೀನ್ ಸ್ಟಾರ್ ಕ್ರಿಕೆಟ್ ಟ್ರೋಫಿ- 2017

ಕಿನ್ನಿಗೋಳಿ:  ಕಿನ್ನಿಗೋಳಿ ಸಮೀಪದ ಗುತ್ತಕಾಡು ಶಾಲಾ ಮೈದಾನದಲ್ಲಿ ಕಿನ್ನಿಗೋಳಿ ಗುತ್ತಕಾಡು ಶಾಂತಿನಗರ ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಎಸೋಸಿಯೇಶನ್‌ನ ದಶಮಾನೋತ್ಸವ ಪ್ರಯುಕ್ತ ಗ್ರೀನ್ ಸ್ಟಾರ್ ಕ್ರಿಕೆಟ್ ಟ್ರೋಫಿ- 2017 ನಡೆಯಿತು. ಪಂದ್ಯಾಟದಲ್ಲಿ ಮುಕ್ಕ ತಂಡ ಪ್ರಥಮ ಪ್ರಶಸ್ತಿ, ನವಚೈತನ್ಯ ತಂಡ ದ್ವಿತೀಯ ಪ್ರಶಸ್ತಿ ಪಡೆದು ಕೊಂಡಿತು. ನಾಗರಾಜ ಉತ್ತಮ ಎಸೆತಗಾರ, ಯಶವಂತ್ ಪಂದ್ಯಶ್ರೇಷ್ಟ, ತೌನಿಷ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ. ಎಚ್ ಮಯ್ಯದ್ದಿ , ಪ್ರಕಾಶ್ ಹೆಗ್ಡೆ , ಚಂದ್ರಶೇಖರ್, ಸಂತೋಷ್ ಕುಮಾರ್, ಗುತ್ತಕಾಡು ಶಾಲಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಹಸನಬ್ಬ , ಶಶಿಕಾಂತ್ ರಾವ್ ಎಳತ್ತೂರು, ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಅಧ್ಯಕ್ಷ ಗುಲಾಂ ಹುಸೈನ್, ಫೈಝಲ್, ಟಿ. ಎ. ಹನೀಫ್ ಟಿ. ಕೆ. ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-09031704

Comments

comments

Comments are closed.

Read previous post:
Kinnigoli-09031703
ಕಿನ್ನಿಗೋಳಿ: ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಕ್ರೀಡಾ ಮನೋಭಾವದೊಂದಿಗೆ ಜನಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು. ಕಾಪಿಕಾಡು ಫ್ರೆಂಡ್ಸ್ ಕಿನ್ನಿಗೋಳಿ ವತಿಯಿಂದ ಕಿನ್ನಿಗೋಳಿ...

Close