ಶಿಸ್ತು ಸಂಸ್ಕಾರ ಮಾನವೀಯತೆ ಮುಖ್ಯ

ಕಿನ್ನಿಗೋಳಿ : ಮನುಷ್ಯರಿಗೆ ಧರ್ಮಜಾತಿ ಮುಖ್ಯವಾಗಿರದೆ ಶಿಸ್ತು ಸಂಸ್ಕಾರ ಮಾನವೀಯತೆ ಮುಖ್ಯವಾಗಿರಬೇಕು. ಸಂಘಟನೆಗಳು ಸಮಾಜದಲ್ಲಿನ ದುಶ್ಚಟಗಳನ್ನು ದೂರವಿರಿಸಲು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಎಂದು ಯುವ ವಾಗ್ಮಿ ಸಹನಾ ಕುಂದರ್ ಸೂಡ ಹೇಳಿದರು.
ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವತಿಯಿಂದ ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಬುಧವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಇಂದಿನ ದಿನಗಳಲ್ಲಿ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವ ಧಾರವಾಹಿಗಳ ಕಾಲ್ಪನಿಕ ಕುಟುಂಬ ಒಡೆಯುವಂತಹ ಕತೆಗಳನ್ನು ನೋಡುತ್ತೇವೆ. ಮನರಂಜನೆ ನಮಗೆ ಮುಖ್ಯ ಆದರೂ ನಮ್ಮ ಮಕ್ಕಳ ಬಗ್ಗೆ ಕಾಳಜಿ, ಅಭಿವೃದ್ಧಿಪರ ಹಾಗೂ ಉತ್ತಮ ಸಂಸ್ಕೃತಿ ಆಚಾರ ವಿಚಾರಗಳನ್ನು ಬಿಂಬಿಸುವ ಮಾಧ್ಯಮಗಳ ಬಗ್ಗೆ ತಿಳಿ ಹೇಳುವ ಕೆಲಸ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭ ಸಂಗೀತ ವಿದುಷಿ ರತ್ನಾವತಿ ಸಂಜೀವ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೊಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ( ರಿ ) ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನ ಸಮಿತಿಯ ಅಧ್ಯಕ್ಷ ಎಮ್. ಪ್ರಥ್ವಿರಾಜ್ ಆಚಾರ್ಯ ಉಪಸ್ಥಿತರಿದ್ದರು.
ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಗೀತಾ ವೈ. ಆಚಾರ್ಯ ಸ್ವಾಗತಿಸಿದರು. ರೇವತಿ ಬಹುಮಾನ ವಿಜೇತರ ವಿವರ ನೀಡಿದರು. ಅನಿತಾ ವಂದಿಸಿದರು. ರಾಜೇಶ್ವರೀ ಕಾರ್ಯಕ್ರಮ ನಿರೂಪಿಸಿದರು.

Kinnigoli-09031705

Comments

comments

Comments are closed.

Read previous post:
Kinnigoli-09031704
ಕಿನ್ನಿಗೋಳಿ ಗ್ರೀನ್ ಸ್ಟಾರ್ ಕ್ರಿಕೆಟ್ ಟ್ರೋಫಿ- 2017

ಕಿನ್ನಿಗೋಳಿ:  ಕಿನ್ನಿಗೋಳಿ ಸಮೀಪದ ಗುತ್ತಕಾಡು ಶಾಲಾ ಮೈದಾನದಲ್ಲಿ ಕಿನ್ನಿಗೋಳಿ ಗುತ್ತಕಾಡು ಶಾಂತಿನಗರ ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಎಸೋಸಿಯೇಶನ್‌ನ ದಶಮಾನೋತ್ಸವ ಪ್ರಯುಕ್ತ ಗ್ರೀನ್ ಸ್ಟಾರ್ ಕ್ರಿಕೆಟ್ ಟ್ರೋಫಿ- 2017 ನಡೆಯಿತು. ಪಂದ್ಯಾಟದಲ್ಲಿ...

Close