ಶೋಷಿತರ ಪರ ಮಹಿಳೆ ಧ್ವನಿಯಾಗಬೇಕು

 ಕಿನ್ನಿಗೋಳಿ : ಸಮಾಜದಲ್ಲಿರುವ ಶೋಷಿತರ ಪರ ಧ್ವನಿಯಾಗಿ ಮಹಿಳೆ ಪ್ರಯತ್ನಿಸಿದಲ್ಲಿ ಪ್ರೀತಿ ವಿಶ್ವಾಸ ಸ್ನೇಹ ಸೌಹಾರ್ಧತೆಯ ಸಮಾಜ ನಿರ್ಮಾಣವಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಛಾದ ಸಹಯೋಗದಲ್ಲಿ ಗುರುವಾರ ನಡೆದ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆ ಲೀಲಾವತಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹಿರಿಯ ಸಮಾಜ ಸೇವಕಿ ಲಲಿತಾ ಭಾಸ್ಕರ ಕೆರೆಕಾಡು ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಮೂಡಬಿದಿರೆ ಬಿಜೆಪಿ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು, ಜಿಲ್ಲಾ ಸಮಿತಿಯ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ, ದ.ಕ. ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಕುಸುಮಾ ಚಂದ್ರಶೇಖರ್, ಜಯಲಕ್ಷ್ಮೀ ನಾಯಕ್, ಕ್ಷೇತ್ರದ ಉಪಾಧ್ಯಕ್ಷೆ ಆಶಾ ರತ್ನಾಕರ್ ಸುವರ್ಣ, ಪ್ರಧಾನ ಕಾರ್ಯದರ್ಶಿ ವಂದನಾ ಪ್ರಭು ಉಪಸ್ಥಿತರಿದ್ದರು.
ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆ ಲೀಲಾವತಿ ರಾವ್ ಸ್ವಾಗತಿಸಿದರು, ಕಾರ್ಯದರ್ಶಿ ಭಾರತಿ ಶೆಟ್ಟಿ ಎಕ್ಕಾರು ವಂದಿಸಿದರು. ಸದಸ್ಯೆ ಸರೋಜಾ ಕಾರ್ಯಕ್ರಮ ನಿರೂಪಿಸಿದರು.

Kinnigoli-09031706

Comments

comments

Comments are closed.

Read previous post:
Kinnigoli-09031705
ಶಿಸ್ತು ಸಂಸ್ಕಾರ ಮಾನವೀಯತೆ ಮುಖ್ಯ

ಕಿನ್ನಿಗೋಳಿ : ಮನುಷ್ಯರಿಗೆ ಧರ್ಮಜಾತಿ ಮುಖ್ಯವಾಗಿರದೆ ಶಿಸ್ತು ಸಂಸ್ಕಾರ ಮಾನವೀಯತೆ ಮುಖ್ಯವಾಗಿರಬೇಕು. ಸಂಘಟನೆಗಳು ಸಮಾಜದಲ್ಲಿನ ದುಶ್ಚಟಗಳನ್ನು ದೂರವಿರಿಸಲು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಎಂದು ಯುವ ವಾಗ್ಮಿ ಸಹನಾ ಕುಂದರ್...

Close