ಕಿನ್ನಿಗೋಳಿ: ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಕ್ರೀಡಾ ಮನೋಭಾವದೊಂದಿಗೆ ಜನಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಕಾಪಿಕಾಡು ಫ್ರೆಂಡ್ಸ್ ಕಿನ್ನಿಗೋಳಿ ವತಿಯಿಂದ ಕಿನ್ನಿಗೋಳಿ ಶ್ರೀ ರಾಮಮಂದಿರದ ಬಳಿಯ ಮೈದಾನದಲ್ಲಿ ರಾಘವೇಂದ್ರ ಶೆಟ್ಟಿ ಸ್ಮರಣಾರ್ಥಟ್ರೋಫಿ – 2017 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ.ಕ. ಜಿ. ಪಂ. ಮಾಜಿ ಸದಸ್ಯ ಈಶ್ವರ್ ಕಟೀಲು ಕಾರ್ಯಕ್ರಮ ಉದ್ಘಾಟಿಸಿ ಜಾತಿ ಮತ ಬೇಧ ಮರೆತು ಒಗ್ಗಟ್ಟಿನಿಂದ ಸೌಹಾರ್ಧಯುತ ಸಂಘಟನೆಯಾಗಿ ಬೆಳೆದು ಮಾದರಿಯಾಗಬೇಕು. ಕ್ರೀಡಾಕೂಟ ಆಯೋಜಿಸಿ ಅದರ ಉಳಿಕೆ ಹಣವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಹಿರಿಯ ಸಾಧಕರಾದ ಕೆ. ಸೀತಾರಾಮ ಶೆಟ್ಟಿ, ಕೃಷಿಕ ಬಾಲಣ್ಣ ಶೆಟ್ಟಿ, ಪಶುವೈದ್ಯಾಧಿಕಾರಿ ಬಿ. ಡಿ ಜಯರಾಮ ಶೆಟ್ಟಿ , ಜಯಲಕ್ಷ್ಮೀ ಎಮ್. ಕಾಮತ್ ಅವರನ್ನು ಸನ್ಮಾನಿಸಲಾಯಿತು.
ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು , ಬಸು ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ, ನವೀನ್ ಕುಮಾರ್ ಕಟೀಲು, ಸೀತಾರಾಮ ಶೆಟ್ಟಿ, ಸಂದೀಪ್ ಪೂಜಾರಿ, ವಿನ್ಸಂಟ್ ಡಿಸೋಜ ಮತ್ತಿತರರಿದ್ದರು. ಶ್ರೀಶ ಸರಾಫ್ ಐಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-09031703

Comments

comments

Comments are closed.

Read previous post:
Kinnigoli-09031701
ಹೊನಲು ಬೆಳಕಿನ ದಫ್ ಸ್ಪರ್ಧಾ ಕೂಟ

ಕಿನ್ನಿಗೋಳಿ  ಹಳೆಯಂಗಡಿ ಕದಿಕೆಯಲ್ಲಿ ಶನಿವಾರ ನಡೆದ ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಹಿ ದರ್ಗಾ ಶರೀಫ್‌ನ ಉರೂಸ್ ಸಂದರ್ಭ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ...

Close