ಶಾಂತಿನಗರ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೊಳಿ ಸಮೀಪದ ತಾಳಿಪಾಡಿ ಎಳತ್ತೂರು ಶ್ರೀ ಮೂಕಾಂಬಿಕಾ ದೇವಳ ಶಾಂತಿನಗರ ಇದರ 36 ನೇ ವರ್ಷದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮಾ. 13 ರಿಂದ ಮಾ. 15 ರ ತನಕ ನಡೆಯಲಿದೆ.
ಮಾ. 13 ರಂದು ತೋರಣ ಮಹೂರ್ತ, ಅಶ್ವತ್ಥವೃಕ್ಷಕ್ಕೆ ಉಪನಯನ ಸಂಸ್ಕಾರ, ವಿದ್ಯಾ ಗಣಪತಿ ದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶ, ಮಾ. 14 ರಂದು ಶ್ರೀ ಕ್ಷೇತ್ರ ನಾಗ ದೇವರ ಸನ್ನಿಧಿಯಲ್ಲಿ ಪವಮಾನ ಸೂಕ್ತ ಹೋಮ, ಸಾರ್ವಜನಿಕ ಆಶ್ಲೇಷ ಬಲಿ, ನಾಗತಂಬಿಲ ಸೇವೆ, ಸಂಜೆ ಸಾರ್ವಜನಿಕ ಸತ್ಯನಾರಾಯಣ ಪೂಜೆ , ಭಜನಾ ಕಾರ್ಯಕ್ರಮ, ಮಾ. 15 ರಂದು ಮುಂಜಾನೆ ಭಜನೆ ಸಂಕೀರ್ತನೆ ನಗರ ಪ್ರದಕ್ಷಿಣೆ, ಚಂಡಿಕಾ ಹವನ, ರಾತ್ರಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ ಎಂದು ದೇವಳದ ಧರ್ಮದರ್ಶಿ ವಿವೇಕಾನಂದ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli109031702
ಪ. ಪೊ. ಶ್ರೀ ಗುರೂಜಿ ಜನ್ಮದಿನೋತ್ಸವ

ಕಿನ್ನಿಗೋಳಿ: ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸದೊಂದಿಗೆ ದೇಶ ಪ್ರೇಮದ ಚಿಂತನೆಗೆ ಹೆಚ್ಚಿನ ಒತ್ತು ಕೊಟ್ಟ ಮಹಾನ್ ಚೇತನ ಪೂಜ್ಯ ಗುರೂಜಿ ಅವರನ್ನು ನೆನಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ...

Close