ಮಹಿಳೆಯರಲ್ಲಿ ಸಮಾನತೆಯ ಅಹಂ ಬೇಡ

ಕಿನ್ನಿಗೋಳಿ: ಮಹಿಳೆಯರು ಪುರುಷರು ಸಮಾಜದ ಎಲ್ಲಾ ಸ್ಥಾನಮಾನದಲ್ಲೂ ಸಮಾನತೆಯನ್ನು ಪಡಕೊಂಡರೂ ಅದರ ದುರುಪಯೋಗ ಮಾಡದೆ ಸಹಬಾಳ್ವೆಯ ಧ್ಯೇಯ ಹೊಂದಿರಬೇಕು. ಮಹಿಳೆಯರು ಯುವ ಜನರನ್ನು ಜಾಗೃತಿಗೊಳಿಸಿ ಅಭಿವೃದ್ದಿ ಪಥದತ್ತ ದಾರಿತೋರಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಎಂದು ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಹನಾ ಕುಂದರ್ ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಮಂಗಳೂರಿನ ನೆಹರು ಯುವ ಕೇಂದ್ರ ಹಾಗೂ ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಲದ ಜಂಟಿ ಆಶ್ರಯದಲ್ಲಿ ಬುಧವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಧುರಿ ಗುರುರಾಜ್ ಅವರನ್ನು ಸನ್ಮಾನಿಸಲಾಯಿತು.
ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಪಡುಬಿದ್ರಿ ನವಶಕ್ತಿ ವಿಮನ್ಸ್ ವೆಲ್‌ಫೇರ್ ಸೊಸೈಟಿಯ ಕಸ್ತೂರಿ ರಾಮಚಂದ್ರ, ಹಳೆಯಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಟ್ರಸ್ಟಿ ಶೆಡ್ಡೆ ಪ್ರಭಾಕರರಾವ್, ಶ್ರಿ ವಿದ್ಯಾವಿನಾಯಕ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ನಾಗೇಶ್ ಟಿ.ಜಿ., ಸಲಹಾ ಸಮಿತಿಯ ಅಧ್ಯಕ್ಷ ಸದಾಶಿವ ಅಂಚನ್ ಚಿಲಿಂಬಿ, ಪಾವಂಜೆ ದೇವಳದ ಚಂದ್ರಮ್ಮ, ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಸುಮತಿ ರಾವ್, ಪಡುಪಣಂಬೂರು ಗಾಯಿತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸತ್ಯಾ, ಪಾವಂಜೆ ಮಹಾಲಿಂಗೇಶ್ವರ ಮಾತೃ ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಎಂ., ಇಂದಿರಾನಗರ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತಾ, ಎಸ್.ಕೋಡಿ ಸಂಗಮ ಮಹಿಳಾ ಮಂಡಳಿಯ ಅಧ್ಯಕ್ಷೆ ದಮಯಂತಿ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಯುವವಾಹಿನಿ ಕಾರ್ಯದರ್ಶಿ ಚಂದ್ರಿಕಾ ಪ್ರವೀಣ್ ಕೋಟ್ಯಾನ್, ಹಳೆಯಂಗಡಿ ಅಂಗನವಾಡಿಯ ಶಿಕ್ಷಕಿ ಗೀತಾ ಸುಕುಮಾರ್, ಯುವತಿ ಮಂಡಲದ ಅಧ್ಯಕ್ಷೆ ದಿವ್ಯಶ್ರಿ ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ರಾಮಚಂದ್ರ ಸ್ವಾಗತಿಸಿ, ವಂದಿಸಿದರು. ನೆಹರು ಯುವ ಕೇಂದ್ರದ ಅಫ್ಸನಾ ಪ್ರಸ್ತಾವನೆಗೈದರು, ರೇಷ್ಮಾ ಅಶ್ರಫ್ ಮತ್ತು ಸುಜಾತಾ ವಾಸುದೇವ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಸಭಾಂಗಣದಲ್ಲಿ ವಿವಿಧ ಸ್ತ್ರೀ ಸಂಘಟನೆಗಳ ಮೂಲಕ ಮಹಿಳೆಯರೇ ಮನೆಯಲ್ಲಿ ತಯಾರಿಸಿದ ತಿಂಡಿ-ತಿನಸುಗಳು, ತರಕಾರಿಗಳು, ಆಟಿಕೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

Kinnigoli109031703

Comments

comments

Comments are closed.

Read previous post:
ಶಾಂತಿನಗರ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೊಳಿ ಸಮೀಪದ ತಾಳಿಪಾಡಿ ಎಳತ್ತೂರು ಶ್ರೀ ಮೂಕಾಂಬಿಕಾ ದೇವಳ ಶಾಂತಿನಗರ ಇದರ 36 ನೇ ವರ್ಷದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮಾ. 13 ರಿಂದ ಮಾ. 15...

Close