ಕೊಡೆತ್ತೂರು ಅರಸು ಕುಂಜರಾಯ

ಕಿನ್ನಿಗೋಳಿ: ಪರಶುರಾಮ ಸೃಷ್ಟಿಯ ತುಳುನಾಡಿನ ಜನರು ಅಪಾರ ದೈವ ದೇವರುಗಳ ಭಕ್ತಿಯನ್ನು ಹೊಂದಿದವರು. ಧರ್ಮ ಕ್ಷೇತ್ರಗಳಲ್ಲಿ ಧರ್ಮಜಾಗೃತಿ ಮತ್ತು ಮಾನಸಿಕ ನೆಮ್ಮದಿ ದೊರಕುತ್ತದೆ. ನಂಬಿಕೆ ಹಾಗೂ ಸಾಧನೆಯಿಂದ ಯಶಸ್ಸನ್ನು ಸಾಧಿಸಬಹುದು. ಎಂದು ತುಳು ಸಾಹಿತ್ಯ ಆಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ವಾರ್ಷಿಕ ನೇಮದ ಸಂಧರ್ಭ ಶುಕ್ರವಾರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಕಾಲದಲ್ಲಿ ನಿಧಾನವಾಗಿ ನಾವು ಧಾರ್ಮಿಕ ಆಚರಣೆಗಳಿಂದ ದೂರ ಹೋಗುತ್ತಿದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೆ ಜನಜಂಗುಳಿ ಇರುತ್ತದೆ ಈ ಬಗ್ಗೆ ಯುವ ಜನರಿಗೆ ಶಿಸ್ತು ಸಂಸ್ಕಾರ ಆಚಾರ ವಿಚಾರಗಳ ಬಗ್ಗೆ ತಿಳಿ ಹೇಳಬೇಕಾದ ಕಾರ್ಯ ಹಿರಿಯರು ಹಾಗೂ ಧರ್ಮಕ್ಷೇತ್ರಗಳಿಂದಾಗಬೇಕಾಗಿದೆ ಎಂದು ಮಾಜಿ ಶಾಸಕ ಯಕ್ಷಗಾನ ಅರ್ಥಧಾರಿ ಕುಂಬಳೆ ಸುಂದರ ರಾವ್ ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂದರ್ಭ ತಿಮ್ಮಪ್ಪ ಆಚಾರ್ಯ ಕೊಡೆತ್ತೂರು, ಕೋಟಿ ಮೂಲ್ಯ ಚಂದ್ರ ಮಂಡಲ, ಸಂಜೀವ ಅಂಚನ್ ಮುಕ್ಕಾಲ್ದಿಬೆನ್ನಿ, ಮಂಗಳೂರು ಮಹಿಳಾ ಪಾಲಿಟೆಕ್ನಿಕ್ ಎಚ್.ಓ.ಡಿ ಹರೀಶ್ ಶೆಟ್ಟಿ ಅವರನ್ನು Pತ್ರದ ವತಿಯಿಂದ ಗೌರವಿಸಲಾಯಿತು.
ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಎಲ್ಲೂರು ಯುಪಿಸಿಎಲ್ ಅದಾನಿ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಉದ್ಯಮಿ ಸೌಂದರ್ಯ ರಮೇಶ್, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ , ಬಜಪೆ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಎಕ್ಕಾರು, ಎಳತ್ತೂರು ದೇವಳ ಆಡಳಿತ ಮೊಕ್ತೇಸರ ಸಂತೋಷ ಕುಮಾರ್ ಹೆಗ್ಡೆ, ದೇವೆಂದ್ರ ಗುನ್ನನ್ ಪೆರ್ಮುದೆ, ಸಾಗರಿಕ ಸಂಸ್ಥೆಯ ಧನಂಜಯ ಶೆಟ್ಟಿಗಾರ್, ರಾಜೇಂದ್ರ ಶೆಟ್ಟಿ ಮುಂಬಯಿ , ದಿವಾಕರ ಶೆಟ್ಟಿ, ಸಾಂತ್ಯ ಬಾಸ್ಕರ್ ಶೆಟ್ಟಿ, ಲೋಕೇಶ್ ಶೆಟ್ಟಿ ಬರ್ಕೆ, ಕಲ್ಪೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂದೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-11031701

Comments

comments

Comments are closed.

Read previous post:
Kinnigoli-110304
ಕಿನ್ನಿಗೋಳಿ ವಿಜಯೋತ್ಸವ

ಕಿನ್ನಿಗೋಳಿ: ಉತ್ತರ ಭಾರತದ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದ ಹಿನ್ನಲೆಯಲ್ಲಿ ಕಿನ್ನಿಗೋಳಿ ಬಿಜೆಪಿ ವತಿಯಿಂದ ಶನಿವಾರ ಕಿನ್ನಿಗೋಳಿ ಸುಖಾನಂದ ಶೆಟ್ಟಿ ವೃತ್ತದ ಬಳಿ ಪಟಾಕಿ ಸಿಡಿಸಿ...

Close