ಕಾಂಕ್ರೀಟಿಕರಣ ರಸ್ತೆ ಉದ್ಘಾಟಣೆ

ಕಿನ್ನಿಗೋಳಿ: ದ.ಕ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಅತ್ತೂರು ಕೊಯಿಕುಡೆ ವಾರ್ಡ್ ಸದಸ್ಯರ ಅನುದಾನದಲ್ಲಿ 3.50 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ತೂರು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ಕಾಂಕ್ರೀಟಿಕರಣ ರಸ್ತೆಯನ್ನು ಶನಿವಾರ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ಕೆ. ಭುವನಾಬಿರಾಮ ಉಡುಪ ಉದ್ಘಾಟಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೋಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ ಅಂಚನ್, ಮುಲ್ಕಿ ಮೂಡಬಿದಿರೆ ಯುವ ಮೋರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಸದಸ್ಯರಾದ ಲೋಹಿತ್ ಕುಮಾರ್, ಹರಿ ಪ್ರಸಾದ್, ಮಾಲತಿ ಆಚಾರ್ಯ, ಪ್ರಮೀಳಾ ಡಿ ಶೆಟ್ಟಿ, ಸುಧಾಕರ ಶೆಟ್ಟಿ ಕೆಮ್ರಾಲ್, ಸೇಸಪ್ಪ ಸಾಲಿಯಾನ್, ಬಿಜೆಪಿ ಮುಖಂಡರಾದ ಜಯರಾಮ ಆಚಾರ್ಯ, ಬೇಬಿ ಸುಂದರ ಕೋಟ್ಯಾನ್, ಅಮರ್ ಶೆಟ್ಟಿ, ಸಚಿನ್ ಶೆಟ್ಟಿ ಅತ್ತೂರು, ಧನುಷ್ ಕುಲಾಲ್, ಶರತ್ ಅಮೀನ್, ಕೆಮ್ರಾಲ್ ಪಿಡಿಒ ರಮೇಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11031702

Comments

comments

Comments are closed.

Read previous post:
Kinnigoli109031703
ಮಹಿಳೆಯರಲ್ಲಿ ಸಮಾನತೆಯ ಅಹಂ ಬೇಡ

ಕಿನ್ನಿಗೋಳಿ: ಮಹಿಳೆಯರು ಪುರುಷರು ಸಮಾಜದ ಎಲ್ಲಾ ಸ್ಥಾನಮಾನದಲ್ಲೂ ಸಮಾನತೆಯನ್ನು ಪಡಕೊಂಡರೂ ಅದರ ದುರುಪಯೋಗ ಮಾಡದೆ ಸಹಬಾಳ್ವೆಯ ಧ್ಯೇಯ ಹೊಂದಿರಬೇಕು. ಮಹಿಳೆಯರು ಯುವ ಜನರನ್ನು ಜಾಗೃತಿಗೊಳಿಸಿ ಅಭಿವೃದ್ದಿ ಪಥದತ್ತ ದಾರಿತೋರಿಸುವಲ್ಲಿ...

Close