ತೋಕೂರು ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಜೀವನದಲ್ಲಿ ಎಲ್ಲಾ ರೀತಿಯ ನೋವು ನಲಿವುಗಳನ್ನು ಎದುರಿಸುವ ಮಹಿಳೆಯರು ಸುಶಿಕ್ಷಿತ ಸುಸಂಸ್ಕೃತರಾಗಿ ಸಂಘಟಿತರಾಗಿ ಬೆಳೆಯಬೇಕು. ಎಂದು ಹಿರಿಯ ಸಾಹಿತಿ ಹೆಚ್. ಶಕುಂತಳಾ ಭಟ್ ಹೇಳಿದರು.
ಮಂಗಳೂರು ನೆಹರು ಯುವ ಕೇಂದ್ರ, ಪಡುಪಣಂಬೂರು ಗ್ರ್ರಾಮ ಪಂಚಾಯಿತಿ, ಯುವಕ ಸಂಘ ಮತ್ತು ಮಹಿಳಾ ಮಂಡಲ ತೋಕೂರು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ತೋಕೂರು ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ತೋಕೂರು ಯುವಕ ಸಂಘದ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಸಬಲೀಕರಣ ಉಪನ್ಯಾಸ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಹಳೆಯಂಗಡಿ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಗಿರಿಜವ್ವ ಮೆಣಸಿನ ಕಾಯಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಪ್ರತಿಯೊಬ್ಬ ಮಹಿಳೆಯರು ಕೌಶಲ್ಯಭರಿತರಾಗಿದ್ದಾರೆ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿದಾಗ ಸಾಧಕರಾಗಿ ಇತರರಿಗೂ ಪ್ರೇರಣಾ ಶಕ್ತಿಯಾಗಬಲ್ಲರು ಎಂದರು.
ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಲತಾ ಎಸ್., ತೋಕೂರು ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಯಶೋಧಾ ರಾವ್, ಅಧ್ಯಕ್ಷೆ ವಿನೋದಾ ಭಟ್, ಕಾರ್ಯದರ್ಶಿ ಮಮತಾ ಉಪಸ್ಥಿತರಿದ್ದರು.

Kinnigoli-110303

Comments

comments

Comments are closed.

Read previous post:
Kinnigoli-11031702
ಕಾಂಕ್ರೀಟಿಕರಣ ರಸ್ತೆ ಉದ್ಘಾಟಣೆ

ಕಿನ್ನಿಗೋಳಿ: ದ.ಕ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಅತ್ತೂರು ಕೊಯಿಕುಡೆ ವಾರ್ಡ್ ಸದಸ್ಯರ ಅನುದಾನದಲ್ಲಿ 3.50 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ತೂರು ಕೆಮ್ರಾಲ್...

Close