ತೋಕೂರು :ಪೊಂಜೊವುಲೆನ ತುಡರ ಪರ್ಬ

ಕಿನ್ನಿಗೋಳಿ: ಪ್ರಾಚೀನ ಕಾಲದಿಂದಲೂ ಸಮಾಜದಲ್ಲಿ ಹೆಣ್ಣಿಗೆ ಉನ್ನತ ಸ್ಥಾನ ಮಾನ ಇತ್ತು. ಮಹಿಳೆಯರು ಸುಸಂಸ್ಕೃತ ಹಾಗೂ ಸಂಘಟಿತರಾದಾಗ ಮಾತ್ರ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಡರಾಗುತ್ತಾರೆ. ಎಂದು ದಾಯಿಜಿ ವರ್ಲ್ಡ್ ಕಾರ್ಯಕ್ರಮ ನಿರೂಪಕಿ ದೀಪ್ತಿ ಬಾಲಕೃಷ್ಣ ಹೇಳಿದರು.
ತೊಕೂರು ಕಂಬಳಬೆಟ್ಟು ಶ್ರೀದೇವಿ ಮಹಿಳಾ ಮಂಡಲದ ವಠಾರದಲ್ಲಿ ಶ್ರೀ ದೇವಿ ಮಹಿಳಾ ಮಂಡಲ, ಕಂಬಳಬೆಟ್ಟು ತೋಕೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ಲಯನ್ಸ್ ಕ್ಲಬ್ ಮೂಲ್ಕಿ ಹಾಗೂ ಲಯನ್ಸ್ ಕ್ಲಬ್ ಕಿನ್ನಿಗೋಳಿ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಶನಿವಾರ ನಡೆದ ಪೊಂಜೊವುಲೆನ ತುಡರ ಪರ್ಬ ಕಾರ್ಯಕ್ರಮದಲ್ಲಿ ಹೆಣ್ಣು ಸಮಾಜದ ಕಣ್ಣು ಹೇಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಮೂಡಬಿದಿರೆ ಆಳ್ವಾಸ್ ಪ. ಪೂ. ಕಾಲೇಜು ಉಪನ್ಯಾಸಕಿ ಸುಧಾರಾಣಿ ಕಾರ್ಯಕ್ರಮ ಉದ್ಘಾಟಿಸಿದರು.
ತೋಕೂರು ಎಮ್‌ಆರ್ ಪೂಂಜಾ ಐಟಿಐ ಸಂಸ್ಥೆಯ ಪ್ರಿನ್ಸಿಪಾಲ್ ಯಶವಂತ್ ಎನ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅಂಚೆ ವಿತರಕ ಶಂಕರ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು. ೬೦ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಅರ್ಥಿಕ ಧನಸಹಾಯ ನೀಡಲಾಯಿತು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗೀಶ್ ರಾವ್, ಮೂಲ್ಕಿ ಸುವರ್ಣ ಆಟ್ಸ್ ಸಂಸ್ಥೆಯ ಚಂದ್ರಶೇಖರ ಸುವರ್ಣ, ರಿಧಮ್ ಸಾಂಸ್ಕೃತಿಕ ವೇದಿಕೆಯ ನಿರ್ದೇಶಕ ಸುಧಾಕರ, ನಿವೃತ್ತ ಶಿಕ್ಷಕಿ ಗಾಯತ್ರಿ ಎಸ್ ಉಡುಪ, ತೊಕೂರು ಕಂಬಳಬೆಟ್ಟು ಶ್ರೀದೇವಿ ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಮಲತಾ ಸ್ವಾಗತಿಸಿದರು. ವಿಮಲ ಬಂಗೇರ ವರದಿ ವಾಚಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು.

Kinnigoli-120301 Kinnigoli-120302

Comments

comments

Comments are closed.

Read previous post:
ಪಾವಂಜೆಯಲ್ಲಿ ಮೀನ ಸಂಕ್ರಮಣೋತ್ಸವ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ 2018ರಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪ್ರತಿ ತಿಂಗಳ ಸಂಕ್ರಮಣದಂದು ನಡೆಯಲಿರುವ ಸಂಕ್ರಮಣೋತ್ಸವ ದಿನ ಮಾರ್ಚ್ 14 ಮಂಗಳವಾರ ಬೆಳಿಗ್ಗೆ...

Close