ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರ : ಮಾ.17 ಚತುಷ್ಟವಿತ್ರ ನಾಗ ಬ್ರಹ್ಮಮಂಡಲೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಮೂಲ್ಕಿ ಒಂಭತ್ತು ಮಾಗಣೆಗೆ ಸಂಬಂಧಿಸಿರುವ ತುಳುನಾಡಿನ ಕಾರಣಿಕ ವೀರಪುರುಷರಾದ ಕಾಂತಾಬಾರೆ ಬೂದಾಬಾರೆಯರ ಜನ್ಮಕ್ಷೇತ್ರದ ನಾಗಬನದಲ್ಲಿ ಮಾರ್ಚ್ 17 ಶುಕ್ರವಾರ ಚತುಷ್ಪವಿತ್ರ ನಾಗಬ್ರಹ್ಮಮಂಡಲೋತ್ಸವ ನಡೆಯಲಿದೆ ಎಂದು ಸಮಿತಿಯ ಗೌರವ ಸಲಹೆಗಾರ ಬಿಪಿನ್ ಪ್ರಸಾದ್ ಹೇಳಿದರು
ವೆ. ಮೂ ಶ್ರೀಧರ ಭಟ್ ಏಳಿಂಜೆ ಅವರ ನೇತ್ರತ್ವದಲ್ಲಿ ನಾಗಪಾತ್ರಿ ವೆ.ಮೂ. ರಾಮಚಂದ್ರ ಕುಂಜಿತ್ತಾಯ ಶ್ರೀ ಕ್ಷೇತ್ರ ಕಲ್ಲಂಗಳ, ಕೃಷ್ಣಪ್ರಸಾದ ವೈದ್ಯ ಮತ್ತು ಬಳಗ ಮದ್ದೂರು, ನಾಗಕನ್ನಿಕೆಯರಾಗಿ ನಟರಾಜ್ ವೈದ್ಯ, ಬಾಲಕೃಷ್ಣ ವೈದ್ಯರ ಸಹಯೋಗದೊಂದಿಗೆ ಚತುಷ್ಟವಿತ್ರ ನಾಗ ಬ್ರಹ್ಮಮಂಡಲೋತ್ಸವ ನಡೆಯಲಿದೆ.
ನಾಗಬ್ರಹ್ಮಮಂಡಲೋತ್ಸವದ ಯಶಸ್ಸಿಗಾಗಿ 150 ಕ್ಕೂ ಹೆಚ್ಚು ಸಂಘಸಂಸ್ಥೆಗಳು ಕೈಜೋಡಿಸಲಿವೆ. ಹದಿನೈದು ಸಾವಿರಕ್ಕಿಂತಲೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ
ಮಾರ್ಚ್ 14 ಮಂಗಳವಾರ ತೋರಣ ಮುಹೂರ್ತ, ಮಾರ್ಚ್ 15 ಬುಧವಾರ ಬೆಳಿಗ್ಗೆ ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಅವರಿಂದ ಉಗ್ರಾಣ ಮುಹೂರ್ತ, ಸಂಜೆ ಶ್ರೀಕ್ಷೇತ್ರ ಬಪ್ಪನಾಡು ಹಾಗೂ ಕಟೀಲು ಕ್ಷೇತ್ರದಿಂದ ಒಂಬತ್ತು ಮಾಗಣೇಯ ಭಕ್ತಾಧಿಗಳು ಸೇವಾರೂಪದಲ್ಲಿ ನೀಡುವ ಹೊರೆಕಾಣಿಕೆ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಆಗಮಿಸಲಿದ್ದು ಹೊರೆಕಾಣಿಕೆ ಮೆರವಣಿಗೆಯನ್ನು ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿರಿಂದ ಉದ್ಘಾಟಿಸಲಿದ್ದಾರೆ. ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಗುವುದು.
ಮಾರ್ಚ್ 16 ಗುರುವಾರ ಬ್ರಹ್ಮಕುಂಭಾಭಿಷೇಕ, ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಮುಲ್ಕಿ ಸೀಮೆ ಅರಸು ದುಗ್ಗಣ್ಣ ಸಾವಂತರು, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ದಾರ್ಮಿಕ ವಿದ್ವಾಂಸ ಪಂಜ ಭಾಸ್ಕರ ಭಟ್, ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಕಾಪು ಶಾಸಕ ವಿನಯಕುಮಾರ ಸೊರಕೆ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಬೆ ನಡೆಯಲಿದೆ. ಸಾಹಿತಿ ವಿಮರ್ಷಕ ಮುದ್ದುಮೂಡುಬೆಳ್ಳೆ, ದಿನೇಶ್ ಪೂಜಾರಿ, ಮಿಥುನ್ ರೈ ಅವರನ್ನು ಸನ್ಮಾನಿಸಲಾಗುವುದು. ಮೂಲ್ಕಿ ಯುವವಾಹಿನಿ ಕಲಾವಿದರಿಂದ ಮುಲ್ಕಿ ಚಂದ್ರಶೇಖರ ಸುವರ್ಣ ನಿರ್ದೇಶನದ 281 ನೇ ಪ್ರಯೋಗ ತುಳುನಾಡ ವೈಭವ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 17 ಶುಕ್ರವಾರ ಬೆಳಿಗ್ಗೆ ಗಣಯಾಗ, ಆಶ್ಲೇಷ ಬಲಿಸೇವೆ ಹೋಮ, ಸುರತ್ಕಲ್ ಅಕ್ಷಯ ಕಲಾವೃಂದ ಅವರಿಂದ ಭಕ್ತಿರಸಮಂಜರಿ, ನಾಗದರ್ಶನ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ವಿವಿಧ ಭಜನಾ ಮಂಡಳಿ ಅವರಿಂದ ಭಜನಾ ಸಂಕೀರ್ತನಾ ಸೇವೆ, ನಾಗಬ್ರಹ್ಮರಿಗೆ ಹಾಲಿಟ್ಟು ಸೇವೆ. ರಾತ್ರಿ ಪವಿತ್ರವಾದ ಚತುಷ್ಟವಿತ್ರ ನಾಗಬ್ರಹ್ಮಮಂಡಲೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.

ಇತಿಹಾಸ ಪುರುಷರ ಕ್ಷೇತ್ರದಲ್ಲಿ ಕಾಂತಾಬಾರೆ ಬೂದಾಬಾರೆಯರ ಉಡುಗೆ, ರಸಮಯ ಬಾವಿ, ತಾಕೊಡೆ ಮರ, ಅವರು ಒಂದೇ ದಿನದಲ್ಲಿ ನಿರ್ಮಿಸಿದ ಪಜಕ್ಯಾರು ಗದ್ದೆ ಹೀಗೆ ಮೂಲ ವಿಚಾರಗಳನ್ನು ಉಳಿಸಿಕೊಂಡು ಯಾತ್ರಾ ಸ್ಥಳವಾಗಿ ರೂಪಿಸಲು ರೂ. 2 ಕೋಟಿಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ವಿಶೇಷ ಅನುದಾನ ದೊರಕುವ ಭರವಸೆ ಇದೆ. ಇಲ್ಲಿಗೆ ಈಗಾಗಲೇ ರಸ್ತೆ ನಿರ್ಮಾಣವಾಗಿದ್ದು, ಸಮುದಾಯ ಭವನ, ಯಾತ್ರಿ ಕೇಂದ್ರ, ಮ್ಯೂಸಿಯಂ ಥೀಮ್ ಪಾರ್ಕ್ ಇತ್ಯಾದಿ ಯೋಜನೆಯ ಕನಸುಗಳಿವೆ ಎಂದು ಅಧ್ಯಕ್ಷ ದಾಮೋದರ ದಂಡಕೇರಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಪಧದಾಧಿಕಾರಿಗಳಾದ ಗಂಗಾಧರ ಪೂಜಾರಿ, ವಿನೋದರ ಪೂಜಾರಿ, ಶೀನ ಡಿ.ಪೂಜಾರಿ, ಹರೀಂದ್ರ ಸುವರ್ಣ, ಕಿಶೋರ್ ಕುಮಾರ್ ದಂಡಕೇರಿ, ಚಂದ್ರಶೇಖರ್ ಜಿ, ಪ್ರಮೋದ್ ಕುಮಾರ್, ಚಂದ್ರ ಶೇಖರ ನಾನಿಲ್, ಅನಿಲ್ ಬಂಗೇರ ಮುಕ್ಕ, ಧನಂಜಯ ಮಟ್ಟು, ಎಲ್ಲಪ್ಪ ಸಾಲ್ಯಾನ್, ಗಣೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Janmakshethra

 

Comments

comments

Comments are closed.

Read previous post:
Kinnigoli-12031704
ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘ

ಕಟೀಲು:  ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಸಂಜೀವ ಮಡಿವಾಳ, ಉಪಾಧ್ಯಕ್ಷರಾಗಿ ಸ್ಟಾನಿ ಪಿಂಟೋ ಆಯ್ಕೆಯಾಗಿದ್ದಾರೆ.

Close