ಮೊದಲ ಹಂತದ ಕಾಮಗಾರಿಗಳ ಲೋಕಾರ್ಪಣೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವತಿಯಿಂದ ಸರಕಾರದ ವಿವಿಧ ಅನುದಾನಗಳ ಮೂಲಕ ಒಂದು ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾದ ಸಸಿಹಿತ್ಲು ಬೀಚ್‌ನ ಮೊದಲ ಹಂತದ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ಮಾ.19 ರಂದು ಸಂಜೆ 5.30ಕ್ಕೆ ಬೀಚ್‌ನ ಆವರಣದಲ್ಲಿ ನಡೆಯಲಿದೆ.
ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ.
ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾ.ಪಂ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾ.ಪಂ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮಾಜಿ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ದ.ಕ.ಜಿ.ಪಂ. ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಮಂಗಳೂರು ಉದ್ಯಮಿ ಮಿಥುನ್ ರೈ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಧನಂಜಯ ಕೋಟ್ಯಾನ್ ಮಟ್ಟು, ದ.ಕ.ಜಿಲ್ಲಾ ಯೋಜನಾ ಸಮಿತಿ ಸದಸ್ಯ ಜಿ.ಎಂ.ಆಸೀಫ್, ಹಳೆಯಂಗಡಿ ಸಮಾಜ ಸೇವಕ ನರೇಂದ್ರ ಪ್ರಭು ಉಪಸ್ಥಿತರಿರುವರು.
ಸಂಜೆ ೫ರಿಂದ ಸಾಂಸ್ಕೃತಿಕ ಕಾರ್ಯಕ್ರಮ ತುಳುಹಾಸ್ಯ ಸಂಜೆ: ಕಾಲು ಪ್ರಶಂಸ ತಂಡದವರಿಂದ ಬಲೆ ತೆಲಿಪುಲೆ ತುಳು ಹಾಸ್ಯ ನಡೆಯಲಿದೆ ತುಳು ಮತ್ತು ಕನ್ನಡ ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್, ತುಳು, ಕನ್ನಡ ತೆಲುಗು ಮತ್ತು ತಮಿಳು ಚಲನಚಿತ್ರ ನಟಿ ಚಿರಶ್ರೀ ಅಂಚನ್, ಬಾಲಿವುಡ್ ಕೊರಿಯೋಗ್ರಾಫರ್ ಕೊಂಕಣಿ ಚಲನಚಿತ್ರನಟ ಎಲ್‌ಟಾನ್ ಮಸ್ಕರೇಂನ್ಹಸ್, ತುಳುಚಲನಚಿತ್ರ ನಟಿ ಪೂಜಾ ಶೆಟ್ಟಿ, ತುಳು ಚಲನಚಿತ್ರನಟ ಪೃಥ್ವಿ ಅಂಬರ್ ಉಪಸ್ಥಿತರಿರುವರು ಜಿಲ್ಲೆಯ ಸುಪ್ರಸಿದ್ಧ ನೃತ್ಯ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಬೆರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-150301
ಚತುಷ್ಪವಿತ್ರ ನಾಗಬ್ರಹ್ಮಮಂಡಲ ಸೇವೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರ ಕೊಲ್ಲೂರಿನಲ್ಲಿ 17 ರಂದು ನಡೆಯುವ ಚತುಷ್ಪವಿತ್ರ ನಾಗಬ್ರಹ್ಮಮಂಡಲ ಸೇವೆಯ ಪೂರ್ವಬಾವಿಯಾಗಿ ಬುಧವಾರ ಉಗ್ರಾಣ ಮೂಹೂರ್ತ ನಡೆಯಿತು. ಕಟೀಲು ದೇವಳ...

Close