ಗಿಡಿಗೆರೆ-ಮನೆ ಹಸ್ತಾಂತರ

ಕಿನ್ನಿಗೋಳಿ: ಕೊಂಡೆಮೂಲ ನಾರಾಯಣ ಮುಗೇರ ಅವರ ಪತ್ನಿ ಮೀನಾಕ್ಷಿ ಗಿಡಿಗೆರೆ ಅವರಿಗೆ ಸೀಮಾ ಸ್ಟ್ಯಾನಿ ಪಿಂಟೋ ದಂಪತಿಗಳು ಹಾಗೂ ಕರ್ನಾಟಕ ಸರಕಾರದ ಬಸವ ಯೋಜನೆ ಅನ್ವಯ ನಿರ್ಮಿಸಲಾದ ಮನೆಯನ್ನು ಶುಕ್ರವಾರ ಹಸ್ತಾಂತರಿಸಲಾಯಿತು. ಈ ಸಂದರ್ಭ ಮನೆ ಕಟ್ಟುವ ಸಮಯ ತನ್ನ ಮನೆಯಲ್ಲಿ ತಂಗಲು ಸಹಾಯ ಹಸ್ತ ನೀಡಿದ ಲಲಿತಾ ಅವರನ್ನು ಸನ್ಮಾನಿಸಲಾಯಿತು. ಕಟೀಲು ಸಂತ ಜಾಕೋಬರ ಚರ್ಚ್ ಧರ್ಮ ಗುರು ರೆ.ಫಾ. ರೊನಾಲ್ಡ್ ಕುಟಿನ್ಹಾ, ಇಂದಿರ ಗಾಂಧಿ ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಶೈಲಾ ಸಿಕ್ವೇರಾ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಮುಲ್ಕಿ ಮೂಡಬಿದಿರೆ ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಅಭಿಲಾಶ್ ಶೆಟ್ಟಿ, ಕಟೀಲು ಗ್ರಾ.ಪಂ. ಸದಸ್ಯೆ ಪದ್ಮಲತಾ, ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಂಜೀವ ಮಡಿವಾಳ, ಉಪಾಧ್ಯಕ್ಷ ಸ್ಟ್ಯಾನಿ ಪಿಂಟೊ, ನಿವೃತ್ತ ಶಿಕ್ಷಕಿ ಲೀನಾ ರೆಬೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.

Kinnigoli-160317022

Comments

comments

Comments are closed.

Read previous post:
Kinnigoli-16031702
ಪುನರೂರು – ಜಲಾಲಿಯಾ ರಾತೀಬ್

ಕಿನ್ನಿಗೋಳಿ: ಸಮಾಜದಲ್ಲಿರುವ ಧರ್ಮಗಳ ನಡುವೆ ಪರಸ್ಪರ ಅರಿತುಕೊಳ್ಳುವ ಮನೋಭಾವನೆ ಇದ್ದಾಗ ಅಂತಹ ಸಮಾಜದಲ್ಲಿ ಸೌಹಾರ್ದ ವಾತಾವರಣ ಮೂಡುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು...

Close