ಮಾ.19: ಲಯನ್ಸ್ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಹಳೆಯಂಗಡಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಲಯನ್ಸ್ ಜಿಲ್ಲಾ ಮಟ್ಟದ ಕ್ರಿಕೆಟ್ ಲೀಗ್ ಪಂದ್ಯಾಟ ಮಾರ್ಚ್ 19 ಭಾನುವಾರ ಪಣಂಬೂರು ಎನ್‌ಎಂಪಿಟಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಜಿಲ್ಲಾ ಗವರ್ನರ್ ಎಂ.ಅರುಣ್ ಶೆಟ್ಟಿ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ. ಸಹಾಯಕ ಗವರ್ನರ್‌ಗಳಾದ ಎಚ್.ಆರ್.ಹರೀಶ್ ಮತ್ತು ಕೆ.ದೇವದಾಸ್ ಭಂಡಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಮೊಯ್ದಿನ್ ಬಾವ ಬಹುಮಾನ ವಿತರಿಸಲಿದ್ದಾರೆ ಎಂದು ಜಿಲ್ಲಾ ಕ್ರಿಕೆಟ್ ಪಂದ್ಯಾಟದ ಸಂಯೋಜಕ ಯಾದವ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-16031701
ಗುತ್ತಕಾಡು – ಶ್ರೀ ಮೂಕಾಂಬಿಕಾ ದೇವಳ

ಕಿನ್ನಿಗೋಳಿ: ಗುತ್ತಕಾಡು ಶಾಂತಿ ನಗರ ಶ್ರೀ ಮೂಕಾಂಬಿಕಾ ದೇವಳದ ವಠಾರದಲ್ಲಿ ಬುಧವಾರ ಸುಂಕದಕಟ್ಟೆ ಮೇಳದವರಿಂದ ನಡೆದ ಬಯಲಾಟ ಸಂದರ್ಭ ಮೇಳದ ಕಲಾವಿದರಾದ ಮೋಹನ್ ದೇವಾಡಿಗ ಎನ್. ಸತೀಶ್...

Close