ಶ್ರೀ ಕಾಂತಾಬಾರೆ ಬೂದಬಾರೆ ಜನ್ಮಕ್ಷೇತ್ರ ಧಾರ್ಮಿಕ ಸಭೆ

ಕಿನ್ನಿಗೋಳಿ: ನ್ಯಾಯ ನೀತಿ, ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಅವಳಿ ವೀರಪುರುಷರಾದ ಕಾಂತಾಬಾರೆ ಬೂದಾಬಾರೆ ಅವರು ಮೂಲ್ಕಿ ಸೀಮೆಯ ಕಾರಣಿಕ ಪುರುಷರಾಗಿ ದೈವಾಂಶ ಸಂಭೂತರಾಗಿ ಪೂಜಿಸಲ್ಪಡುತ್ತಿದ್ದಾರೆ. ಅವರು ಎಲ್ಲಾ ರೀತಿಯಲ್ಲಯೂ ನಮಗೆ ಮಾರ್ಗದರ್ಶಕರಾಗಿದ್ದಾರೆ. ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಹೇಳಿದರು.
ಕಿನ್ನಿಗೋಳಿ ಸಮೀಪದ ಮೂಲ್ಕಿ ಒಂಭತ್ತು ಮಾಗಣೆಗೆ ಸಂಬಂಧಪಟ್ಟಿರುವ ಶ್ರೀ ಕಾಂತಾಬಾರೆ ಬೂದಬಾರೆ ಜನ್ಮಕ್ಷೇತ್ರದಲ್ಲಿ ಚತುಷ್ಟವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಮಾತನಾಡಿ ಈಗಾಗಲೇ ರಸ್ತೆ ನಿರ್ಮಾಣವಾಗಿದ್ದು, ಸಮುದಾಯ ಭವನ, ಯಾತ್ರಿ ಕೇಂದ್ರ, ಮ್ಯೂಸಿಯಂ ಥೀಮ್ ಪಾರ್ಕ್ ಯೋಜನೆಯ ಕನಸುಗಳು ಸಮಿತಿಗಿದ್ದು ಯಾತ್ರಾ ಸ್ಥಳವಾಗಿ ರೂಪಿಸಲು ರೂ. ೨ಕೋಟಿಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಸರಕಾರದಿಂದ ವಿಶೇಷ ಅನುದಾನ ನೀಡುವ ಬಗ್ಗೆ ಪ್ರಯತ್ನಿಸಲಾಗುವುದು. ಎಂದು ಹೇಳಿದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ವಿದ್ವಾಂಸ ಪಂಜ ಭಾಸ್ಕರ ಭಟ್ ಧಾರ್ಮಿಕ ಪ್ರವಚನ ನೀಡಿದರು.
ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು.
ಸಾಹಿತಿ, ವಿಮರ್ಶಕ, ಜಾನಪದ ಸಂಶೋಧಕ ಮುದ್ದು ಮೂಡುಬೆಳ್ಳೆ ಹಾಗೂ ಕುಂಪಲ ಶ್ರೀ ಕೃಷ್ಣಾಂಜನೇಯ ದೇವಳದ ಗೌರವಾಧ್ಯಕ್ಷ ಮಿಥುನ್ ರೈ ಅವರನ್ನು ಸನ್ಮಾನಿಸಲಾಯಿತು.
ಒಂಬತ್ತು ಮಾಗಣೆಯ ದಳವಾಯಿ ಪಟ್ಟ ಪಡೆದ ಅಂತಪ್ಪ ನಾಯ್ಗರು ಗುಡ್ಡೆಸಾನ, ಗೋಪಾಲ ನಾಯ್ಗರು ಕಾರ್ನಾಡು, ಬಂಕಿ ನಾಯ್ಗರು ಹಳೆಯಂಗಡಿ ಹಾಗೂ ದಿ. ವಿಠಲ ಪೂಜಾರಿ ಸ್ಮರಣಾರ್ಥ ಅವರ ಪುತ್ರ ದಿನೇಶ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಕಾಪು ಶಾಸಕ ವಿನಯಕುಮಾರ ಸೊರಕೆ, ಪುನರೂರು ಪ್ರತಿಷ್ಠಾನ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪನರೂರು, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಎಸ್ . ಸಾಯಿರಾಮ್, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಡಾ. ಪಿ. ಸಂಜೀವ ದಂಡಕೇರಿ, ನಿವೃತ್ತ ಅಸಿಸ್ಟೆಂಟ್ ಲೇಬರ್ ಕಮೀಷನರ್ ದೇವೇಂದ್ರ ಪೂಜಾರಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಚಲನಚಿತ್ರ ನಟ ನಿರ್ಮಾಪಕ ನಿರ್ದೇಶಕ ಡಾ. ರಾಜಶೇಖರ ಕೋಟ್ಯಾನ್, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ , ಮುಲ್ಕಿ ಪೋಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ನಾಗಬ್ರಹ್ಮಮಂಡಲೋತ್ಸವ ಸಮಿತಿಯ ಅಧ್ಯಕ್ಷ ದಾಮೋದರ ದಂಡಕೇರಿ, ಗೌರವ ಸಲಹೆಗಾರರಾದ ಬಿಪಿನ್ ಪ್ರಸಾದ್, ವಿನೋದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೀನ ಡಿ. ಪೂಜಾರಿ, ಕೋಶಾಧಿಕಾರಿ ಹರೀಂದ್ರ ಸುವರ್ಣ, ಸಹಕೋಶಾಧಿಕಾರಿ ಕಿಶೋರ್ ಕುಮಾರ್ ದಂಡಕೇರಿ, ಲೆಕ್ಕಪರಿಶೋಧಕ ಚಂದ್ರಶೇಖರ್ ಜಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ಸುವರ್ಣ ಮತ್ತು ಸುಗಂಧಿ ಸತೀಶ್ ಕೋಟ್ಯಾನ್ ಪ್ರಾರ್ಥಿಸಿದರು. ನಾಗ ಬ್ರಹ್ಮಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ ಧನಂಜಯ ಮಟ್ಟು ಸ್ವಾಗತಿಸಿದರು. ಶೇಷಪ್ಪ ಕೆ. ಪ್ರಸ್ತಾವನೆಗೈದರು. ಕಾರ್ಯಧ್ಯಕ್ಷ ಗಂಗಾಧರ ಪೂಜಾರಿ ವಂದಿಸಿದರು. ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-160317023 Kinnigoli-160317024 Kinnigoli-160317025

Comments

comments

Comments are closed.

Read previous post:
Kinnigoli-16031703
ಕೊಲ್ಲೂರು ನಾಗಬ್ರಹ್ಮಮಂಡಲ – ಹೊರೆ ಕಾಣಿಕೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಮಾರ್ಚ್ 17 ಶುಕ್ರವಾರ ನಡೆಯಲಿರುವ ಚತುಷ್ಪವಿತ್ರ ನಾಗಬ್ರಹ್ಮಮಂಡಲ ಸೇವೆಯ ಪೂರ್ವಬಾವಿಯಾಗಿ ಬುಧವಾರ ಹೊರೆ ಕಾಣಿಕೆಗೆ ಕಿನ್ನಿಗೋಳಿ ಸ್ವಾಮಿ ವಿವೇಕಾನಂದ...

Close