ಕ್ರಿಸ್ತ ಜ್ಯೋತಿ ಸ್ವ ಸಹಾಯ ಸಂಘದ ದಶಮಾನೋತ್ಸವ

ಮೂಲ್ಕಿ: ನಾನು ಎಲ್ಲರಿಗಾಗಿ ಮತ್ತು ಎಲ್ಲರೂ ನನಗಾಗಿ ಎಂಬ ತತ್ವದಂತೆ ಪರಸ್ಪರ ಸಹಾಯ ಸಹಕಾರ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಂಗಳೂರು ಸಿಒಡಿಪಿ ನಿರ್ದೇಶಕರಾದ ಪಾ,ಓಸ್ವಲ್ಡ್ ಮೊಂತೇರೊ ಹೇಳಿದರು.
ಮೂಲ್ಕಿ ಕಾರ್ನಾಡು ಸೈಂಟ್ ಜೋಸೆಪ್ ಹಾಲ್ ನಲ್ಲಿ ಭಾನುವಾರ ಜರುಗಿದ ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಪ್ರವರ್ತಿತ ಕ್ರಿಸ್ತ ಜ್ಯೋತಿ ಸ್ವ ಸಹಾಯ ಸಂಘದ ದಶಮಾನೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದರು.
ಏಸುಕ್ರಿಸ್ತರು ಶಾಂತಿ ಸಮಾಧಾನಗಳನ್ನು ಜಗತ್ತಿಗೆ ನೀಡಿದ ಮಹಾಪುರುಷರು ಅವರ ತತ್ವದಂತೆ ನಾವೆಲ್ಲರೂ ಪರಸ್ಪರ ಸಹಕಾರಿಗಳಾಗಿ ದೀನ ವರ್ಗದ ಜನರಿಗೆ ಆಶಾ ಕಿರಣವಾಗಿ ಮೂಡಿ ಬರಬೇಕು ಸರಕಾರದ ಸೌಲಭ್ಯಗಳು ಅರ್ಹರ ಮನೆಯ ಕದ ತಟ್ಟುವಂತೆ ಮಾಡುವ ಗುರಿ ನಿಮ್ಮದಾಗಬೇಕು ಎಂದರು.
ಈ ಸಂದರ್ಭ ಕ್ರಿಸ್ತ ನಮನ ಸ್ವಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾದ ಬಿಲ್ಲಂಪದವು ನಾರಾಯಣ ಭಟ್ (ಸಾವಯವ ಕೃಷಿ), ಸಿ.ಒಡಿಪಿ ಸಂಯೋಜಕ ರವಿಕುಮಾರ್ ಕ್ರಾಸ್ತ (ಮಾಹಿತಿ ಹಕ್ಕು) ಬಗ್ಗೆ ಮಾಹಿತಿಗಳನ್ನು ನೀಡಿದರು.ಈ ಸಂದರ್ಭ ಕ್ರಿಸ್ತ ಜ್ಯೋತಿ ಸ್ವ ಸಹಾಯ ಸಂಘದ ಸ್ಥಾಪನೆಗೆ ಸಹಕರಿಸಿದ ಫಾ.ವಿಕ್ಟರ್ ಪಿಂಟೋ ರವರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ಧರ್ಮಗುರುಗಳಾದ ಫಾ. ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ವಹಿಸಿದ್ದರು. ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷೆ ಮೋಲಿ ಡಿಸೋಜಾ, ಸ್ವಸಹಾಯ ಸಂಘದ ಅಧ್ಯಕ್ಷ ಫೆಲಿಕ್ಸ್ ತಾವ್ರೋ ಉಪಸ್ಥಿತರಿದ್ದರು. ಫೆಲಿಕ್ಸ್ ತಾವ್ರೊ ಸ್ವಾಗತಿಸಿದರು. ಕಾರ್ಯದರ್ಶಿ ರೋಕಿ ಸಲ್ಡಾನಾ ದಶಮಾನೋತ್ಸವ ವರದಿ ಮಂಡಿಸಿದರು. ಸದಸ್ಯ ವಲೇರಿಯನ್ ರಾಡ್ರಿಗಸ್ ನಿರೂಪಿಸಿದರು. ಕೋಶಾಧಿಕಾರಿ ಲ್ಯಾನ್ಸಿ ಅಲ್ಮೇಡಾ ವಂದಿಸಿದರು.

Mulki-20031704

Comments

comments

Comments are closed.

Read previous post:
Mulki-20031703
ವಿದ್ಯಾಥಿಗಳಿಗೆ ಸೈಕಲ್ ವಿತರಣೆ

ಮೂಲ್ಕಿ: ಗ್ರಾಮೀಣ ಬಡ ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿಸಿ ಉತ್ತಮ ಪ್ರಜೆಗಳಾಗಿ ರೂಪಿಸಲು ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಮೂಲ್ಕಿ ಗಾಂಧಿ...

Close