ಸಸಿಹಿತ್ಲು ಬೀಚ್‌-ಕಾಮಗಾರಿಗಳ ಲೋಕಾರ್ಪಣೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ಲು ಮುಂಡಾ ಬೀಚ್ ಪ್ರವಾಸೋಧ್ಯಮದ ದೃಷ್ಟಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದು ಸರ್ಪಿಂಗ್ ಕ್ರೀಡೆ ಹಾಗೂ ನದಿ ಹಾಗೂ ಸಮುದ ಕೂಡುವಿಕೆಯ ಪ್ರಶಾಂತ ವಾತಾವರಣದಿಂದ ವಿಶ್ವಮಟ್ಟಕ್ಕೆ ಹೆಸರುವಾಸಿಯಾಗುತ್ತಿದೆ. ಹಾಗಾಗಿ ಸರಕಾರದ ಹಲವಾರು ಯೋಜನೆಗಳು ಈ ಪರಿಸರದಲ್ಲಿ ಆಗುತ್ತಿದೆ. ಇನ್ನೂ ಕೂಡಾ ಯೋಜನೆಗಳು ಅಭಿವೃದ್ಧಿಗಳು ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧೀನದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ ಎಂದು ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಹಾಗೂ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.

ಭಾನುವಾರ ಸಸಿಹಿತ್ಲು ಮುಂಡಾ ಬೀಚ್ ಆವರಣದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ವತಿಯಿಂದ ಸರಕಾರದ ವಿವಿಧ ಅನುದಾನಗಳ ಮೂಲಕ ಒಂದು ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾದ ಸಸಿಹಿತ್ಲು ಬೀಚ್‌ನ ಮೊದಲ ಹಂತದ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರಾವಳಿ ತೀರದಲ್ಲಿ ಮನ ಸೆಳೆಯುವಂತಹ ಪ್ರಕೃತಿಯ ಸೌಂದರ್ಯವನ್ನು ಹೊಂದಿರುವಂತಹ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಮುಂದಿನ ಮೇ ತಿಂಗಳಲ್ಲಿ ನಡೆಯುವ ಸರ್ಪಿಂಗ್ ಚಾಂಪಿಯನ್‌ಶಿಪ್ ಆಯೋಜಿಸಲು ಕರ್ನಾಟಕ ಸರಕಾರದ ಬಜೆಟ್‌ನಲ್ಲಿ ಮಂಜೂರಾಗಿದೆ. ಮೇ ತಿಂಗಳಿನಲ್ಲಿ ೫ ದಿನಗಳ ಕಾಲ ಜರಗಲಿರುವ ರಾಷ್ತ್ರ ಮಟ್ಟದ ಸರ್ಫಿಂಗ್ ಕ್ರೀಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಚಾಲನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಜಲ ಸಾಹಸಕ್ರೀಡೆಗಳಿಗೆ ಅನುದಾನ ಮೀಸಲು ಇಡಲಾಗುತ್ತದೆ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಮುತುವರ್ಜಿ ವಹಿಸಲಾಗುತ್ತದೆ. ಸುಸಜ್ಜಿತ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಮಾಡಲಾಗುವುದು ಎಂದು ಕೆ. ಅಭಯಚಂದ್ರ ಜ್ಯೆನ್ ಹೇಳಿದರು.
ಈ ಸಂದರ್ಭ ಕೆ. ಮೊದಿನ್ ಅವರಿಗೆ ಪುಖ್ಯಮಂತ್ರಿ ಪರಿಹಾರ ನಿದಿಯಿಂದ 40 ಸಾವಿರ, ಸಯ್ಯದ್ ಸಸಿಹಿತ್ಲು ಅವರಿಗೆ ಪ್ರಕೃತಿ ವಿಕೋಪ ಪರಿಹಾರ ಧನ ನೀಡಲಾಯಿತು.
ಮಂಗಳೂರು ತಾ.ಪಂ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾ.ಪಂ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮಾಜಿ ಅಧ್ಯಕ್ಷ ಹಾಗೂ ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ದ.ಕ.ಜಿ.ಪಂ. ಮಾಜಿ ಅಧ್ಯಕ್ಷೆ ಸುಗಂದಿ ಕೊಂಡಾಣ, ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಮಂಗಳೂರು ಉದ್ಯಮಿ ಮಿಥುನ್ ರೈ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಧನಂಜಯ ಕೋಟ್ಯಾನ್ ಮಟ್ಟು, ದ.ಕ.ಜಿಲ್ಲಾ ಯೋಜನಾ ಸಮಿತಿ ಸದಸ್ಯ ಜಿ.ಎಂ.ಆಸೀಫ್, ಹಳೆಯಂಗಡಿ ಸಮಾಜ ಸೇವಕ ನರೇಂದ್ರ ಪ್ರಭು, ಜಿಲ್ಲಾ ಪಂಚಾಯಿತಿರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಸುರತ್ಕಲ್ ಪೋಲೀಸ್ ಇನ್ಸ್‌ಪೆಕ್ಟರ್ ಚೆಲುವರಾಜ್, ಕೋಸ್ಟಲ್ ಸೆಕ್ಯುರಿಟಿ ಇನ್ಸ್‌ಪೆಕ್ಟರ್ ಹರೀಶ್ಚಂದ್ರ ಕೆ.ಪಿ. ಅನಿವಾಸಿ ಉದ್ಯಮಿ ಮಹಮ್ಮದ್ ಸುಲೈಮಾನ್, ಮನ್ಸೂರ್ ಸಾಗ್, ಹಳೆಯಂಗಡಿ ಪಂ.ಸದಸ್ಯರಾದ ಅನಿಲ್ ಕುಮಾರ್, ಮಾಲತಿ ಕೋಟ್ಯಾನ್, ಚಂದ್ರಕುಮಾರ್, ಹಮೀದ್, ಅಬ್ದುಲ್ ಖಾದರ್, ಬಶೀರ್, ಅಝಝ್, ಚಿತ್ರಾ ಸುರೇಶ್, ಪ್ರವೀಣ್ ಸಾಲ್ಯಾನ್, ಶರ್ಮಿಳಾ ಕೋಟ್ಯಾನ್ ಉಪಸ್ಥಿತರಿದ್ದರು.
ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಬೆರ್ನಾಡ್ ಸ್ವಾಗತಿಸಿದರು. ಹಳೆಯಂಗಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಬೂಬಕರ್ ವಂದಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಕಾಪು ಪ್ರಶಂಸ ತಂಡದಿಂದ ಬಲೆ ತೆಲಿಪಾಲೆ, ಜಿಲ್ಲೆಯ ಸುಪ್ರಸಿದ್ದ ನೃತ್ಯ ತಂಡದಿಂದ ನೃತ್ಯ ಕಾರ್ಯಕ್ರಮ ಹಾಗೂ ಹಳೆಯಂಗಡಿ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು.

ಆದ ಕಾಮಗಾರಿಗಳು
ಹಳೆಯಂಗಡಿ ಗ್ರಾಮ ಪಂಚಾಯತ್ ಹಾಗೂ ಸಸಿಹಿತ್ಲು ಬೀಚ್ ಅಭಿವೃದ್ದಿ ಸಮಿತಿ ನೇತ್ರತ್ವದಲ್ಲಿ ಸಮುದ್ರ ತಡೆಗೋಡೆ, ಮೂರು ಉಪಹಾರ ಗೃಹಗಳು, ಸುಸಜ್ಜಿತ ಶೌಚಾಲಯ ಬೀಚ್ ಗೆ ಆಗಮಿಸಲು ಅಗಲವಾದ ಕಾಂಕ್ರೀಟ್ ರಸ್ತೆ, ವಾಹನ ತಂಗುದಾಣ, ಹಳೆಯಂಗಡಿ ಮೂಲಕ ಸಸಿಹಿತ್ಲುವಿಗೆ ಆಗಮಿಸಲು ಕದಿಕೆ ಬಳಿ 7 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ.

Kinnigoli-20031701 Kinnigoli-20031702

Comments

comments

Comments are closed.

Read previous post:
Kinnigoli-18031702
ಶ್ರೀ ಕಾಂತಾಬಾರೆ ಬೂದಬಾರೆ ಜನ್ಮಕ್ಷೇತ್ರ ನಾಗಬ್ರಹ್ಮಮಂಡಲೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಮೂಲ್ಕಿ ಒಂಭತ್ತು ಮಾಗಣೆಗೆ ಸಂಬಂಧಪಟ್ಟಿರುವ ಕೊಲ್ಲೂರು ಶ್ರೀ ಕಾಂತಾಬಾರೆ ಬೂದಬಾರೆ ಜನ್ಮಕ್ಷೇತ್ರದ ನಾಗಬ್ರಹ್ಮ ಪರಿವಾರ ದೇವರುಗಳ ನಾಗಬನದಲ್ಲಿ ವೆ. ಮೂ ಶ್ರೀಧರ ಭಟ್...

Close