ವಿದ್ಯಾಥಿಗಳಿಗೆ ಸೈಕಲ್ ವಿತರಣೆ

ಮೂಲ್ಕಿ: ಗ್ರಾಮೀಣ ಬಡ ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿಸಿ ಉತ್ತಮ ಪ್ರಜೆಗಳಾಗಿ ರೂಪಿಸಲು ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಗಾಂಧಿ ಮೈದಾನದಲ್ಲಿ ಭಾನುವಾರ ಸರಕಾರಿ ಹಾಸ್ಟೆಲ್ ವಿದ್ಯಾಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು.
ಸರಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಉತ್ತಮ ಸಮವಸ್ತ್ರ, ಶೂ, ವಾರದ 4 ದಿನ ಹಾಲು,ಮಧ್ಯಾಹ್ನದ ಬಿಸಿ ಊಟ ಹಾಗೂ ಒಂದನೇ ತರಗತಿಂದಲೇ ಇಂಗ್ಲಿಷ್ ಕಲಿಕೆಯನ್ನು ಪ್ರಾರಂಭಿಸಲಾಗಿದ್ದು ಉತ್ತಮ ಗುಣ ಮಟ್ಟದ ಶಿಕ್ಷಣಕ್ಕಾಗಿ ಪ್ರತಿಭಾನ್ವಿತ ಶಿಕ್ಷಕರನ್ನು ನಿಯೋಜಿಸಲಾಗಿದೆ ರಾಜ್ಯ ಸರಕಾರವು ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಮುಂದೆ ಅವರಿಂದ ಪ್ರದೇಶದ ಬಡತನ ನಿವಾರಣೆಯಾಗುವಂತೆ ಯೋಜನೆ ರೂಪಿಸಿದೆ ಎಂದರು.
ಈ ಸಂದರ್ಭ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ, ಸದಸ್ಯರಾದ ಬಿ.ಎಂ.ಆಸೀಪ್,ಹರ್ಷರಾಜ ಶೆಟ್ಟಿ ಜಿಎಂ, ನೇಮಿರಾಜ್,ಮಹಾಭಲ ಸನಿಲ್, ಜನಾರ್ದನ ಬಂಗೇರಾ, ಮೊಹಮ್ಮದ್, ಸಮಾಜ ಸೇವಕ ಪದ್ಮನಾಭ ಅಮೀನ್, ಹಾಸ್ಟೆಲ್ ವಾರ್ಡನ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Mulki-20031703

Comments

comments

Comments are closed.

Read previous post:
Kinnigoli-20031701
ಸಸಿಹಿತ್ಲು ಬೀಚ್‌-ಕಾಮಗಾರಿಗಳ ಲೋಕಾರ್ಪಣೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ಲು ಮುಂಡಾ ಬೀಚ್ ಪ್ರವಾಸೋಧ್ಯಮದ ದೃಷ್ಟಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದು ಸರ್ಪಿಂಗ್ ಕ್ರೀಡೆ ಹಾಗೂ ನದಿ ಹಾಗೂ ಸಮುದ ಕೂಡುವಿಕೆಯ ಪ್ರಶಾಂತ ವಾತಾವರಣದಿಂದ...

Close