ಮೊಬೈಲ್ ಟವರ್ ವಿರೋಧ ಪಂಚಾಯಿತಿಗೆ ಮುತ್ತಿಗೆ

ಮೂಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ಮೊಬೈಲ್ ಟವರ್ ಸ್ಥಾಪನೆಯನ್ನು ವಿರೋಧಿಸಿ ಸ್ಥಳಿಯ ನಿವಾಸಿಗಳು ಕಿಲ್ಪಾಡಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಬಿ.ಎಂ.ಆಸೀಪ್, ಮೂಲ್ಕಿ ನಗರ ಪಂಚಾಯಿತಿ ಹಾಗೂ ಕಿಲ್ಪಾಡಿ ಗ್ರಾಮ ಪಂ.ಸರಹದ್ದಿನಲ್ಲಿ ಇರುವ ಖಾಸಗಿ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಮೊಬೈಲ್ ಟವರ್‌ನಿಂದ ಹತ್ತಿರದ ಮನೆಗಳಲ್ಲಿ ವಾಸಿಸುವ ಗರ್ಭಿಣಿ ಸ್ತ್ರೀಯರಿಗೆ ಮಕ್ಕಳಿಗೆ ಹತ್ತಿರದಲ್ಲಿ ಇರುವ ಶಾಲೆ ಹಾಗೂ ಮದ್ರಸದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟುಮಾಡುತ್ತದೆ ಈ ಮೊದಲು ಇದೇ ಟವರ್ ಕೆ.ಎಸ್.ರಾವ್ ನಗರದಲ್ಲಿ ನಿರ್ಮಾಣ ಮಾಡುತ್ತಿರುವಾಗ ವಿರೊಧ ವ್ಯಕ್ತ ಪಡಿಸಿರುವವರಲ್ಲಿ ಈಗ ಸ್ಥಳ ನೀಡಿದ ವ್ಯಕ್ತಿಯೂ ಸೇರಿದ್ದರು ಆದರೆ ಇದೀಗ ಹಣದ ಆಸೆಗೆ ಬಲಿಬಿದ್ದು ಜನರ ಸ್ವಾಥ್ಯವನ್ನು ಕಡೆಗಣಿಸಿದ್ದಾರೆ. ಕಿಲ್ಪಾಡಿ ಪಂಚಾಯಿತಿ ಈಗಾಗಲೇ ಅನುಮತಿ ನೀಡಿದೆ ಎಂದು ತಿಳಿದು ಬಂದಿದ್ದು ಈ ಬಗ್ಗೆ ಪುನರ್‌ವಿಮರ್ಷಿಸಿ ಅನುಮತಿ ನಿರಾಕರಿಸಬೇಕು ಎಂದು ಆಗ್ರಹಿಸಿದರು.
ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಶೈಲೇಶ್ ಮಾತನಾಡಿ, ಸಾರ್ವಜನಿಕರಿಗೆ ಸಮಸ್ಯೆಯಾಗುವ ಈ ಟವರ್ ನಿರ್ಮಾಣವನ್ನು ನಾವು ಈಮೊದಲೇ ವಿರೋಧಿಸುತ್ತಾ ಬಂದಿದ್ದೇವೆ ಅವರು ಟವರ್ ನಿರ್ಮಿಮಿಸುವುದಾದರೆ ಜನ ವಸತಿ ಇಲ್ಲದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಿದರೆ ನಮ್ಮ ಆಕ್ಷೇಪವಿಲ್ಲ ಎಂದರು.
ಸ್ಥಳೀಯರಾದ ಧನಂಜಯ ಅಂಚನ್ ಮಾತನಾಡಿ, ಟವರ್ ನಿರ್ಮಾಣ ಪ್ರದೇಶದಲ್ಲಿ ವಾಸ್ತವ್ಯ ಇರುವ ನಮ್ಮಲ್ಲಿ ಯಾರೂ ಈ ಬಗ್ಗೆ ತಿಳಿಸಿಲ್ಲ ಈ ಬಗ್ಗೆ ಮೊದಲೇ ತಿಳಿದಿದ್ದರೆ ವಿರೋಧಿಸುತ್ತಿದ್ದೆವು ಸ್ಥಳೀಯರ ಆರೋಗ್ಯದ ಖಾಳಜಿ ಇರಿಸಿ ಪಂಚಾಯಿತಿ ಅನುಮತಿ ನಿರಾಕರಿಸಬೇಕು ಎಂದರು.
ಈ ಬಗ್ಗೆ ಮನವಿಯನ್ನು ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ರಾವ್ ಮತ್ತು ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ರವರಲ್ಲಿ ನೀಡಲಾಯಿತು. ಈ ಬಗ್ಗೆ ತುರ್ತು ಸಭೆ ಕರೆದು ಪುನರ್ ವಿಮರ್ಷಿಸಿ ತಾಲೂಕು ಪಂಚಾಯಿತಿಗೆ ಮುಂದಿನ ಆದೇಶಕ್ಕಾಗಿ ತಿಳಿಸಲಾಗುವುದು ಎಂದು ಪಿಡಿಒ ಹರಿಶ್ಚಂದ್ರ ಹೇಳಿದರು.
ಈ ಸಂದರ್ಭ ಮೂಲ್ಕಿ ನಗರ ಪಂಚಾಯಿತಿ ವಿರೋಧ ಪಕ್ಷದ ನಾಯಕಿ ವಿಮಲಾ ಪೂಜಾರಿ, ಸದಸ್ಯ ಹಸನ್ ಬಶೀರ್ ಕುಲಾಯಿ,ಅಶೋಕ್ ಪೂಜಾರ್,ಬಶೀರ್ ಅಹಮ್ಮದ್,ಶರೀಪ್ ಕೊಲ್ನಾಡ್, ಮಂಜುನಾಥ ಕಂಬಾರ್. ವೀರೇಶ್ ಹಿರೇಮಠ್,ವಿಠಲ ಎನ್.ಎಂ, ವಸಂತ ಸುವರ್ಣ, ನವೀನ್ ಪುತ್ರನ್, ಜೀವನ್ ಪೂಜಾರಿ,ಎ.ಎಚ್.ಶಮೀರ್, ಮೊಬಿನ್, ಮಹಮ್ಮದ್, ಉಮೇಶ್ ಬಂಗೇರಾ, ನೌಸಲ್ ಮತ್ತಿತರರು ಸ್ಥಳೀಯ ಮಹಿಳೆಯರು. ಉಪಸ್ಥಿತರಿದ್ದರು.

Mulki-30031701Mulki-30031702

Comments

comments

Comments are closed.

Read previous post:
Mulki-20031704
ಕ್ರಿಸ್ತ ಜ್ಯೋತಿ ಸ್ವ ಸಹಾಯ ಸಂಘದ ದಶಮಾನೋತ್ಸವ

ಮೂಲ್ಕಿ: ನಾನು ಎಲ್ಲರಿಗಾಗಿ ಮತ್ತು ಎಲ್ಲರೂ ನನಗಾಗಿ ಎಂಬ ತತ್ವದಂತೆ ಪರಸ್ಪರ ಸಹಾಯ ಸಹಕಾರ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಂಗಳೂರು ಸಿಒಡಿಪಿ ನಿರ್ದೇಶಕರಾದ ಪಾ,ಓಸ್ವಲ್ಡ್...

Close