ಸಮಾಜಸೇವೆ ಹಾಗೂ ಸಾಧನೆ ಯುವಕರಿಗೆ ಮಾದರಿ

ಮುಲ್ಕಿ: ಇಂದಿನ ಅಧುನಿಕ ತಂತ್ರಜ್ಞಾನದಲ್ಲಿ ಹಿರಿಯರ ಸಮಾಜಸೇವೆ ಹಾಗೂ ಮಕ್ಕಳ ಸಾಧನೆ ಯುವಕರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಲಿ, ಜೀವನದಲ್ಲಿ ಸಾಧನೆ ಮಾಡಿದರೆ ಗೌರವ ತನ್ನಿಂತಾನೆ ಹುಡುಕಿಕೊಂಡು ಬರುತ್ತದೆ ಎಂದು ಶಿಮಂತೂರು ದೇವಳ ಆಡಳಿತ ಮೂಕ್ತೇಸರ ಉದಯಕುಮಾರ್ ಶೆಟ್ಟಿ ಹೇಳಿದರು.
ಶಿಮಂತೂರು ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದಂದು ಕ್ಷೇತ್ರದ ಅಡಳಿತ ಮಂಡಳಿ ಹಾಗೂ ಶ್ರೀ ಆದಿಜನಾರ್ದನ ಸೇವಾ ಯುವಕ ಮಂಡಲದ ವತಿಯಿಂದ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಭಿಷೇಕ್ ಕೆ ಶೆಟ್ಟಿ, ಕರಾಟೆ ಸಾಧನೆಗಾಗಿ ಪ್ರದೀಪ್ ಎಸ್ ಆಚಾರ‍್ಯ, ಹಾಗೂ ಸಮಾಜಸೇವೆಗಾಗಿ ಮಾಡ್ರಗುತ್ತು ಸಂಜೀವ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಶಿಮಂತೂರು ದೇವಳ ಆಡಳಿತ ಮಂಡಳಿ ಸದಸ್ಯ ಜಯ ಶೆಟ್ಟಿ, ಬೋಳ ರಘುರಾಮ ಶೆಟ್ಟಿ ಮತ್ತು ಶಿಮಂತೂರು ಆದಿಜನಾರ್ಧನ ಯುವಕಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಯುವಕಮಂಡಲದ ಅಧ್ಯಕ್ಷ ಸತೀಶ್ ಶೆಟ್ಟಿ ಸ್ವಾಗತಿಸಿದರು, ಚಂದ್ರಹಾಸ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Mulki-21031701

Comments

comments

Comments are closed.

Read previous post:
Mulki-30031702
ಮೊಬೈಲ್ ಟವರ್ ವಿರೋಧ ಪಂಚಾಯಿತಿಗೆ ಮುತ್ತಿಗೆ

ಮೂಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ಮೊಬೈಲ್ ಟವರ್ ಸ್ಥಾಪನೆಯನ್ನು ವಿರೋಧಿಸಿ ಸ್ಥಳಿಯ ನಿವಾಸಿಗಳು ಕಿಲ್ಪಾಡಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ...

Close