ಮಾರ್ಚ್ 28-31ಅತ್ತೂರು ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಒಳಪಟ್ಟ ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಮಾರ್ಚ್ 28ರಿಂದ 31ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ ಮಾರ್ಚ್ 28 ರಂದು ಬೆಳಿಗ್ಗೆ 10ಗಂಟೆಗೆ ಅತ್ತೂರು ಭಂಡಾರ ಮನೆಯಿಂದ ಶ್ರೀ ಅರಸು ಕುಂಜಿರಾಯರ ಭಂಡಾರ ಆಗಮಿಸಿ 11 ಗಂಟೆಗೆ ದ್ವಜಾರೋಹಣ ನಡೆಯಲಿದೆ, ರಾತ್ರಿ 8.15 ಕ್ಕೆ ಕಾಪು ರಂಗ ತರಂಗ ಕಲಾವಿದರಿಂದ ಪೊಪ್ಪ ನಾಟಕ, 8.45 ಕ್ಕೆ ಶಿಬರೂರು ಶ್ರೀ ಕೊಡಮಣಿತ್ತಾಯ, ಕಿಲೆಂಜೂರು ಸರಳಧೂಮಾವತಿ, ಕೆಮ್ರಾಲ್ ಮೂಡ್ರಗುತ್ತು ಶ್ರೀ ಕಾಂತೇರಿ ಜುಮಾದಿ- ಬಂಟ, ಕೊಯಿಕುಡೆ ಹರಿಪಾದೆ ಧರ್ಮದೈವ ಜಾರಂತಾಯ ಬಂಟ ದೈವಗಳ ಭಂಡಾರ ಆಗಮಿಸಲಿದೆ, ರಾತ್ರಿ 10 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಶಂಭು ಮುಕಾಲ್ದಿ ಭಂಡಾರ ಮನೆ, ಕಾಂತೇರಿ ಧೂಮಾವತಿ ದೈವದ ಪಾತ್ರಿ ಕಾಚೂರು ಶೇಖರ ಮುಕಾಲ್ದಿ, ಶ್ರೀ ಶಾಮರಾಯ ಶೆಟ್ಟಿ ಗೋಳಿದಡಿ ಅವರಿಗೆ ಗೌರಾವಾರ್ಪಣೆ ನಡೆಯಲಿದ್ದು, ಸ್ಥಳೀಯ ಅನಾರೋಗ್ಯ ಪೀಡಿತ ಮತ್ತು ಸ್ಥಳೀಯ ಪ್ರತಿಭಾನ್ವಿತ ತಲಾ ಮೂರು ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಣೆ ನಡೆಯಲಿದೆ. ರಾತ್ರಿ 11.30 ಕ್ಕೆ ಅರಸು ಕುಂಜಿರಾಯ ದೈವದ ನೆಮೋತ್ಸವ ನಡೆಯಲಿದೆ, 29 ಬುಧವಾರ ಬೆಳಿಗ್ಗೆ 5 ಗಂಟೆಗೆ ಉಳ್ಳಾಯ ರಾತ್ರಿ 7.30ಗಂಟೆಗೆ ಕೊಡಮಣಿತ್ತಾಯ, 10ಗಂಟೆಗೆ ಕಾಂತೇರಿ ಧೂಮಾವತಿ- ಬಂಟ ದೈವದ ನೇಮೋತ್ಸವ ನಡೆಯಲಿದೆ. ಮಾರ್ಚ್ 30 ರಂದು ಸಂಜೆ 6 ಗಂಟೆಗೆ ಮಂಗಳೂರು ಸನಾತನ ಯಕ್ಷಾಲಯ ಅವರಿಂದ ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ, ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಗಿರೀಶ್ ರೈ ಕಕ್ಕೆಪದವು ಇವರ ಕಂಠ ಸಿರಿಯಲ್ಲಿ ಗಣೇಶ್ ಕೊಲಕಾಡಿ ಅವರ ಕನಕ ಕೌಮುದಿ ಕಥಾನಕ ನಡೆಯಲಿದೆ ರಾತ್ರಿ 9.30 ಗಂಟೆಗೆ ಜಾರಂತಾಯ ಬಂಟ ದೈವಗಳ ನೇಮೋತ್ಸವ, 10 ಗಂಟೆಗೆ ಅತ್ತೂರು ಮಾಗಣೆ ಶ್ರೀ ಕೋರ್ದ್ದಬ್ಬು ದೈವದ ಭಂಡಾರ ಆಗಮನ, 11.30ಕ್ಕೆ ಜಾರಂತ್ತಾಯ ಬಂಟ ದೈವಗಳ ಬಂಡಿ ಉತ್ಸವ, ಗ್ರಾಮಸ್ಥರ ಸೂಟೆದಾರ ಸೇವೆ, ಸುಡುಮದ್ದು ಪ್ರದರ್ಶನ, ಜಾರಂತಾಯ, ಕೊರ್ದಬ್ಬು ದೈವದ ಭೇಟಿ 1 ಗಂಟೆಗೆ ಸರಳ ಧೂಮಾವತಿ ಬಂಟ ದೈವದ ನೇಮೋತ್ಸವ ನಂತರ ದ್ವಜಾವರೋಹಣ ನಡೆಯಲಿದೆ, ದೈವಸ್ಥಾನದ ಅಖಿಲಾಂಡೇಶ್ವರೀ ಸನ್ನಿಧಿಯಲ್ಲಿ ಪ್ರತೀ ದಿನ ಧಾರ್ಮಿಕ ಕಾರ್ಯಕ್ರಮ ಮತ್ತು ಮದ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಕೆ ಶೆಟ್ಟಿ ಕುಡ್ತಿಮಾರಗುತ್ತು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Mulki-21031701
ಸಮಾಜಸೇವೆ ಹಾಗೂ ಸಾಧನೆ ಯುವಕರಿಗೆ ಮಾದರಿ

ಮುಲ್ಕಿ: ಇಂದಿನ ಅಧುನಿಕ ತಂತ್ರಜ್ಞಾನದಲ್ಲಿ ಹಿರಿಯರ ಸಮಾಜಸೇವೆ ಹಾಗೂ ಮಕ್ಕಳ ಸಾಧನೆ ಯುವಕರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಲಿ, ಜೀವನದಲ್ಲಿ ಸಾಧನೆ ಮಾಡಿದರೆ ಗೌರವ ತನ್ನಿಂತಾನೆ ಹುಡುಕಿಕೊಂಡು ಬರುತ್ತದೆ...

Close