ಗುತ್ತಕಾಡು ಕಾಮಗಾರಿಯ ಗುದ್ದಲಿ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ಕೊರಗರ ಸಮುದಾಯ ಭವನ ಅಭಿವೃದ್ಧಿಗಾಗಿ 25 ಲಕ್ಷ ರೂ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮುಲ್ಕಿ ಮೂಡಬಿದ್ರಿ ಶಾಸಕ ಕೆ. ಅಭಯಚಂದ್ರ ಜೈನ್ ನೆರವೇರಿಸಿದರು. ಅಡುಗೆಕೋಣೆ, ಆವರಣ ಗೋಡೆ, ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಗಳು ನಡೆಯಲಿದೆ. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು , ನಿರ್ಮಿತಿ ಕೇಂದ್ರದ ಅಧಿಕಾರಿ ಶರತ್, ಗ್ರಾ. ಪಂ. ಸದಸ್ಯರಾದ ವಾಣಿ, ಸುನೀತಾ ರೋಡ್ರಿಗಸ್ ಸಂತೋಷ್ ಕುಮಾರ್, ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಬಿ. ಎಮ್ ಅಸಿಫ್, ಮಹಾಬಲ ಪೂಜಾರಿ, ತಾರನಾಥ , ಪ್ರಭಾಕರ ಶೆಟ್ಟಿ , ಕೊರಗ ಸಮುದಾಯದ ಮುಖ್ಯಸ್ಥ ಸುಂದರ , ಆನಂದ, ಗುತ್ತಿಗೆದಾರರಾದ ಶಫಿ, ಅಬ್ಬಾಸ್ ಅಲಿ, ಟಿ. ಎ. ಹನೀಫ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-24031703

Comments

comments

Comments are closed.

Read previous post:
Kinnigoli-24031702
ಸ್ಟ್ಯಾನ್ಲಿ ಜಯಕರ ಕರ್ಕಡ

ಕಿನ್ನಿಗೋಳಿ: ಹಳೆಯಂಗಡಿ ಪಡುಹಿತ್ಲು ನಿವಾಸಿ ಸ್ಟ್ಯಾನ್ಲಿ ಜಯಕರ ಕರ್ಕಡ (76 ವರ್ಷ ) ಸೋಮವಾರ (ಮಾರ್ಚ್20) ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ....

Close