ಕಟೀಲು ರಮಾನಂದ ರಾವ್ ಸನ್ಮಾನ

ಕಿನ್ನಿಗೋಳಿ : ಕಲೆಯ ಮೂಲಕವಾಗಿ ಯಕ್ಷಗಾನ ಜನರಿಗೆ ಉತ್ತಮ ಸಂದೇಶ ನೀಡುತ್ತಿದ್ದು ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಉಪದೇಶದಿಂದ ಜನರು ಸುಸಂಸ್ಕೃರಾಗುತ್ತಾರೆ ಎಂದು ಕರ್ನಾಟಕ ಬ್ಯಾಂಕ್ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಹೇಳಿದರು.
ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಇದರ ವಿಂಶತಿ ಕಲೋತ್ಸವದ ಅಂಗವಾಗಿ ಕಿನ್ನಿಗೋಳಯ ಯುಗಪುರುಷ ಹಾಗೂ ಯಕ್ಷಲಹರಿ (ರಿ) ಇದರ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಮೋಹಿನಿ ಕಲಾ ಸಂಪದ ಸಂಸ್ಥಾಪಕ ದಿ. ಟಿ. ದಾಮೋದರ ಶೆಟ್ಟಿಗಾರ್ ಸಂಸ್ಮರಣೆ ಸಮ್ಮಾನ -ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಭಾಗವತ ಕಟೀಲು ರಮಾನಂದ ರಾವ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ನ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು. ಯಕ್ಷಗಾನ ಕಲಾವಿದ ಭಾಸ್ಕರ ಪಡುಬಿದ್ರಿ ದಿ.| ದಾಮೋದರ ಶೆಟ್ಟಿಗಾರ್ ಅವರ ಸಂಸ್ಮರಣೆ ಭಾಷಣಗೈದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ( ರಿ ) ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿ ಮನೆ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಸಾಗರಿಕ ಸಂಸ್ಥೆಯ ಧನಂಜಯ ಶೆಟ್ಟಿಗಾರ್, ದೀಪ್ತಿ ಬಾಲಕೃಷ್ಣ ಭಟ್, ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ , ಉಪನ್ಯಾಸಕ ಸದಾಶಿವ ಡಿ. ಶೆಟ್ಟಿಗಾರ್, ಮೋಹಿನಿ ಡಿ. ಶೆಟ್ಟಿಗಾರ್, ನಿವೃತ್ತ ಅಂಚೆ ಇಲಾಖೆಯ ಅಧಿಕಾರಿ ರಮೇಶ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷದೇವ ಮಿತ್ರ ಕಲಾ ಮಂಡಳಿಯ ಎಂ. ದೇವಾನಂದ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶರತ್ ಶೆಟ್ಟಿ ನಿರೂಪಿಸಿದರು.

Kinnigoli-24031705

Comments

comments

Comments are closed.

Read previous post:
ಮಾ.25 ಐಕಳ ಕಂಬಳ

ಕಿನ್ನಿಗೋಳಿ: ಐಕಳ ಬಾವ ಕಾಂತಬಾರೆ- ಬೂದಬಾರೆ ಜೋಡುಕರೆ ಕಂಬಳವು ಸಾಂಪ್ರದಾಯಿಕಬದ್ದವಾಗಿ ಮಾ. 25 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ಕಂಬಳ ಸಮಿತಿಯ ಪ್ರಕಟನೆ ತಿಳಿಸಿದೆ.

Close