ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ

ಕಿನ್ನಿಗೋಳಿ: ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಜನಪರವಾಗಿ ಸಮಾಜ ಮುಖಿ ಚಿಂತನೆಯಿಂದ ತಮ್ಮನ್ನು ತೊಡಗಿಸಿ ತಮ್ಮ ಜೀವನದಲ್ಲಿ ಧನ್ಯತೆ ಕಂಡುಕೊಳ್ಳಬೇಕು ಎಂದು ಲಯನ್ಸ್ ಜಿಲ್ಲೆ 217 ಡಿ ಲಯನ್ಸ್ ಜಿಲ್ಲಾ ಗವರ್ನರ್ ಎಂ. ಅರುಣ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ಗುರುವಾರ ನಡೆದ ಕಿನ್ನಿಗೋಳಿ ಲಯನ್ಸ್ – ಲಯನೆಸ್ ಕ್ಲಬ್‌ಗಳ ಅಧಿಕೃತ ಭೇಟಿ ಸಂದರ್ಭ ಮಾತನಾಡಿದರು.
ಈ ಸಂದರ್ಭ ನಡುಗೋಡು ಶಾಲೆಗೆ ಫ್ಯಾನ್ , ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಯಾನಂದ ಸಾಲ್ಯಾನ್, ದಾಮೋದರ ಶೆಟ್ಟಿಗಾರ್, ಪಾಂಚಾ ಸಾಲ್ಯಾನ್, ಭೋಜ ಪೂಜಾರಿ, ರವಿರಾಜ, ವಿಲಿಯಂ ಮಿರಾಂಡ, ಭಾಸ್ಕರ ಆಚಾರ್ಯ, ಬೆನಡಿಕ್ಟ್ ಕ್ರಾಸ್ತ, ಭೋಜ ಮೇಸ್ತ್ರಿ, ಗುಲ್ಲಿ, ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಮೋದ್ ಕುಮಾರ್ ಹಾಗೂ ಪತ್ನಿ ಸಹನಾ ಪ್ರಮೋದ್ ಅವರನ್ನು ಸನ್ಮಾನಿಸಲಾಯಿತು.
ವತ್ಸಲಾ ರಾವ್, ಮಲತಾ ಶೆಟ್ಟಿ , ನವೀನ್ ಡಿಸೋಜ, ಹಿಲ್ದಾ ಬೆನ್ನಿ ಹೊಸ ಸದಸ್ಯರಾಗಿ ಕಿನ್ನಿಗೋಳಿ ಲಯನ್ಸ್ ಸಂಸ್ಥೆಗೆ ಸೇರ್ಪಡೆಗೊಳಿಸಿಲಾಯಿತು.
ಇಂದಿರಾ ಶೆಟ್ಟಿ, ಪ್ರಾಂತ್ಯಾಧ್ಯಕ್ಷ ಮಹಮ್ಮದ್ ಕುಂಜ್ಞಿ, ವಲಯ ಚೆಯರ್‌ಮನ್ ಪ್ರಶಾಂತ್ ಶೆಟ್ಟಿ, ವಿಜಯಕುಮಾರ್ ಕುಬೆವೂರು, ಕಿನ್ನಿಗೋಳಿ ಲಯನ್ಸ್ ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ಸವಿತಾ ಪಿ. ಶೆಟ್ಟಿ ಮತ್ತಿತತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪನ್ಯಾಸಕ ಜಗದೀಶ ಹೊಳ್ಳ, ವಲೇರಿಯನ್ ಸಿಕ್ವೇರ, ಮೆಲ್ವಿನ್ ಡಿಸೋಜ ಪರಿಚಯಿಸಿದರು. ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವರದಿ ವಾಚಿಸಿ ವಂದಿಸಿದರು. ಲಾರೆನ್ಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-24031707

Comments

comments

Comments are closed.

Read previous post:
Kinnigoli-24031706
ಐ.ಟಿ.ಐ. ವಿದ್ಯಾರ್ಥಿ ಚಾಂಪಿಯನ್

ಕಿನ್ನಿಗೋಳಿ: ನಿಟ್ಟೆ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ವಿದ್ಯಾ ಸಂಸ್ಥೆಯ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ನಿಟ್ಟೆ ಕ್ರೀಡೋತ್ಸವ - 2017 ಕ್ರೀಡಾಕೂಟದಲ್ಲಿ 18 ವರ್ಷದ ಒಳಗಿನ ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಮೂಲ್ಕಿ ರಾಮಕೃಷ್ಣ...

Close