ಅಮ್ಮೆಂಬಾಳ್ ಸುಬ್ಬರಾವ್ ಪೈ ಜನ್ಮ ಜಯಂತಿ

ಮೂಲ್ಕಿ: ಅಮ್ಮೇಂಬಾಳ ಸುಬ್ಬರಾವ್ ಪೈಯವರು ಆರ್ಥಿಕ ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯ ಮೂಲಕ ಸದೃಡ ಸಮಾಜ ನಿರ್ಮಾಣ ಮಾಡಿದ ಮಹಾನ್ ಚೇತನ ಎಂದು ಹಿರಿಯ ಉದ್ಯಮಿ ಯು ವಿ ರಾವ್ ಹೇಳಿದರು.
ಮೂಲ್ಕಿ ಗೌಡ ಸಾರಸ್ವತ ಬಡ ವಿದ್ಯಾರ್ಥಿ ಫಂಡ್ ಮತ್ತು ಸಭಾಗ್ರಹ ಸಮಿತಿಯ ವತಿಯಿಂದ ಅಮ್ಮೆಂಬಾಳ್ ಸುಬ್ಬರಾವ್ ಪೈ ಜನ್ನ ಜಯಂತಿ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೂರದರ್ಶಿತ್ವ ಯೋಜನೆಗಳನ್ನು ಹೊಂದಿದ್ದ ಅಮ್ಮೆಂಬಾಳ್ ಸುಬ್ಬರಾವ್ ಪೈ ಯವರು ಸ್ಥಾಪಿಸಿದ ಶಿಕ್ಷಣ ಹಾಗೂ ವಿತ್ತ ಸಂಸ್ಥೆಗಳು ಅವರು ಸಹಕಾರ ನೀಡಿದ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳು ಇಂದು ಬಹಳ ಉನ್ನತಿಯನ್ನು ಕಂಡಿದೆ ಅಟವರ ತತ್ವ ಆದರ್ಶಗಳು ಸರ್ವಕಾಲಿಕವಾಗಿ ಪ್ರಸ್ತುತ ಎಂದರು.
ಈ ಸಂದರ್ಭ ಅಮ್ಮಂಬಾಳ್ ಸುಬ್ಬರಾವ್ ಪೈ ಯವರ ಭಾವ ಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಲಾಯಿತು. ಕೆನರಾ ಬ್ಯಾಂಕ್ ವಿಭಾಗೀಯ ಪ್ರಭಂದಕ ಯು ಸುರೇಂದ್ರ ಪೈ ಮತ್ತು ಅವರ ಪತ್ನಿ ಸುಧಾ ಪೈಯವರನ್ನು ಗೌರವಿಸಲಾಯಿತು.
ಈ ಸಂದರ್ಭ ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಮೂಲ್ಕಿ ನಪಂ.ಸದಸ್ಯರಾದ ಊಮೇಶ್ ಮಾನಂಪಾಡಿ, ಹರ್ಷರಾಜ ಶೆಟ್ಟಿ ಜಿಎಂ,ವಸಂತಿ ಭಂಡಾರಿ, ರವೀಂದ್ರ ಶೆಟ್ಟಿ ಅಶೋಕ್ ಕುಮಾರ್ ಚಿತ್ರಾಪು ರವರನ್ನು ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಭಾಗ್ರಹ ಸಮಿತಿ ಅಧ್ಯಕ್ಷ ವಿ.ವಿಶ್ವನಾಥ ಕಾಮತ್ ವಹಿಸಿದ್ದರು.
ಗೌಡ ಸಾರಸ್ವತ ಬಡ ವಿದ್ಯಾರ್ಥಿ ಫಂಡ್ ಅಧ್ಯಕ್ಷ ವಾಸುದೇವ ಆರ್.ಕುಡ್ವಾ, ಕಾರ್ಯದರ್ಶಿ ಪ್ರೊ ನಾಗೇಶ್ ಶೆಣೈ,ಕೆ.ನರಸಿಂಹ ಪೈ,ಕೆನರಾ ಬ್ಯಾಂಕ್ ಮೂಲ್ಕಿ ಶಾಖಾ ಪ್ರಭಂದಕ ಶ್ರೀಕರ ಪೈ,ವಿಶ್ರಾಂತ ಪ್ರಭಂದಕ ಕೆ.ಸತೀಶ್ ಭಂಡಾರಿ, ಜಿ.ಎಸ್.ಬಿ ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ,ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ಸಂಚಾಲಕ ಜಿ.ಜಿ.ಕಾಮತ್ ಉಪಸ್ಥಿತರಿದ್ದರು.ನ್ಯಾಯವಾದಿ ವಿ ಸತೀಶ್ ಕಾಮತ್ ನಿರೂಪಿಸಿದರು, ಸತ್ಯೇಂದ್ರ ಶೆಣೈ ವಂದಿಸಿದರು.

Mulki-30031705

Comments

comments

Comments are closed.

Read previous post:
Kinnigoli-25031703
ಐಕಳ ಕಂಬಳ : ಜನರ ನಿರಾಶೆ

ಕಿನ್ನಿಗೋಳಿ: ಅವಿಭಜಿತ ದಕ್ಷಿಣಕನ್ನಡ ಉಡುಪಿ ಜಿಲ್ಲೆಯಾದ್ಯಂತ ಆಗಮಿಸುವ ನೂರಕ್ಕೂ ಅಧಿಕ ಜೋಡಿ ಕೋಣಗಳು, ಜಾತ್ರೆಯ ಸಡಗರ ಹಾಗೂ ಜನಜಂಗುಳಿ ಇದು ಕಂಬಳದಲ್ಲಿ ಕಾಣ ಸಿಗುವ ವೈಭವದ ಹಳ್ಳಿ ಸೊಗಡು....

Close