ಹೊಸ ಅಂಗಣ ಸನ್ಮಾನ ಕಾರ್ಯಕ್ರಮ

ಮೂಲ್ಕಿ: ಆರ್ಥಿಕವಾಗಿ ಬಲಾಢ್ಯರಾಗಿರುವವರನ್ನು ಸನ್ಮಾನಿಸುವ ಕಾರ್ಯ ನಡೆಯುತ್ತಿದ್ದು ಸಮಾಜದಲ್ಲಿ ಪ್ರಚಾರ ಬಯಸದೇ ಸಮಾಜ ಸೇವೆಯನ್ನು ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವಂತಹ ಕಾರ್ಯವನ್ನು ಮಾಡುವ ಮೂಲಕ ಹೊಸ ಅಂಗಣ ಮಾಸ ಪತ್ರಿಕೆಯು ಸಮಾಜಕ್ಕೆ ಮಾದರಿಯಾಗಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಮೂಲ್ಕಿಯ ಸ್ವಾಗತ್ ಹೋಟೇಲ್ ನ ಸಭಾಂಗಣದಲ್ಲಿ ಜರಗಿದ ಸಾಹಿತಿ ಹರಿಶ್ಚಂದ್ರ ಪಿ ಸಾಲ್ಯಾನ್ ಸಂಪಾದಕತ್ವದ ಹೊಸ ಅಂಗಣ ಮಾಸ ಪತ್ರಿಕೆಯ 8 ನೇ ಸಂಚಿಕೆ ಬಿಡುಗಡೆ ಹಾಗೂ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮೂಲ್ಕಿಯ ಒಡೆಯರಬೆಟ್ಟುವಿನ ಉಮೇಶ್ ಕುಂದರ್ ರನ್ನು ಸನ್ಮಾನಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿಯವರು ಮಾಸ ಪತ್ರಿಕೆಯ 8 ನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.ಹಿರಿಯ ಸಾಹಿತಿ ಎನ್ ಪಿ ಶೆಟ್ಟಿ,ಸಮಾಜ ಸೇವಕ ಗುರುವಪ್ಪ ಕೋಟ್ಯಾನ್ ಮತ್ತಿತರಿದ್ದರು. ವಾಮನ್ ಕೋಟ್ಯಾನ್ ನಡಿಕುದ್ರು ಸ್ವಾಗತಿಸಿದರು, ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಹರೀಶ್ಚಂದ್ರ ಸಾಲ್ಯಾನ್ ವಂದಿಸಿದರು. ರವಿಚಂದ್ರ ನಿರೂಪಿಸಿದರು.

Mulki-27031701

Comments

comments

Comments are closed.