ಎಳತ್ತೂರು ಮನೋಜ್ ಪೂಜಾರಿಗೆ ಸನ್ಮಾನ

ಮೂಲ್ಕಿ: ಉನ್ನತ ಶಿಕ್ಷಣ ಉತ್ತಮ ನೌಕರಿ ಗಳಿಕೆಯ ಬಳಿಕ ಐಷಾರಾಮದ ಬೆನ್ನುಹತ್ತುವ ಯುವ ಸಮಾಜಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ತಿಳಿಯಲು ಮನೋಜ್ ಪೂಜಾರಿ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು. ಅವರು ಮೂಲ್ಕಿ ಬಪ್ಪನಾಡು ಸಾಯಿ ಜಿಮ್ ಸದಸ್ಯರು ಸಂಯೋಜಿಸಿದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಉತ್ತಮ ನೌಕರಿಗಳಿಕೆಯ ಬಳಿಕವೂ ತಮ್ಮ ಕೌಟುಂಬಿಕ ಬಳುವಳಿಯಾಗಿ ಬಂದ ಅರ್ಚಕ ಕರ್ತವ್ಯವನ್ನು ನಿರ್ವಧಹಿಸುವ ಮೂಲಕ ಯುವ ಸಮಾಜಕ್ಕೆ ಅವರು ಮಾದಿರಿ ವ್ಯಕ್ತಿಯಾಗಿದ್ದಾರೆ ಎಂದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ ಮಾತನಾಡಿ,ಧಾರ್ಮಿಕ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ ಬೆಳೆಸುವುದು ಯುವ ಸಮಾಜದ ಕರ್ತವ್ಯವಾಗಬೇಕು. ಆಧುನೀಕತೆಯ ಬದುಕಿನಲ್ಲಿಯೂ ಧಾರ್ಮಿಕ ಚಿಂತನೆಗಳಿಗೆ ಹಾಗೂ ಕರ್ತವ್ಯಗಳಿಗೆ ಸಮಯ ಮೀಸಲಿಡಬೇಕು ಈ ನಿಟ್ಟಿನಲ್ಲಿ ಮನೋಜ್ ಪೂಜಾರಿ ಯುವ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭ ಮೂಲ್ಕಿ ಪೋಲೀಸ್ ಉಪ ನಿರೀಕ್ಷಕ ಸಾಂತಪ್ಪ ಹಾಗೂ ಸಮಾಜ ಸೇವಕ ಸಾಧು ಅಂಚನ್ ಮಟ್ಟು ಅಭಿನಂದನಾ ಮಾತುಗಳನ್ನಾಡಿದರು.
ಈ ಸಂದರ್ಭ ಮನೋಜ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಮನೋಜ್,ಜೀವನದ ಉನ್ನತಿಗೆ ಪೈಲೆಟ್ ತರಬೇತಿ ಪಡೆದು ಬಳಿಕ ಪೈಲೆಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹಿರಿಯರ ಆಶೀರ್ವಾದದಿಂದ ದೈವದ ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ ನಮ್ಮ ಕ್ಷಿಪ್ರ ಅಭಿವೃದ್ಧಿಗೆ ದೈವಗಳ ಸಹಾಯವಿದೆ ಎಂದು ನಂಬಿದ್ದೇನೆ ಎಂದರು.
ಈ ಸಂದರ್ಭ ಗ್ರಹರಕ್ಷಕದಳ ಮೂಲ್ಕಿ ಘಟಕಾಧಿಕಾರಿ ಎಚ್. ಮನ್ಸೂರ್,ಸಾಯಿ ಜಿಮ್ ಶಿಕ್ಷಕ ಚೇತನ್ ಬಂಗೇರಾ ಅತಿಥಿಗಳಾಗಿದ್ದರು.ಸಾಯಿ ಜಿಮ್ ವಿದ್ಯಾರ್ಥಿಗಳು ಮತ್ತು ಮನೋಜ್ ಪೂಜಾರಿಯವರ ಆತ್ಮೀಯರು ಉಪಸ್ಥಿತರಿದ್ದರು. ಮನ್ಸೂರ್ ಸ್ವಾಗತಿಸಿದರು, ರಿತೇಶ್.

Mulki-30031706

Comments

comments

Comments are closed.

Read previous post:
Kinnigoli-27031702
ನೆಲಗುಡ್ಡೆ ಶ್ರೀ ಕೋರ‍್ದಬ್ಬು ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ನೆಲಗುಡ್ಡೆ ಶ್ರೀ ಕೋರ‍್ದಬ್ಬು ದೈವಸ್ಥಾನದಲ್ಲಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

Close