ಗೇರುಕಟ್ಟೆ ಗಂಗಯ್ಯ ಶೆಟ್ಟಿ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಕಟೀಲು ಯಕ್ಷಗಾನ ಮೇಳದಲ್ಲಿ ನಿರಂತರ 48 ವರ್ಷ ಕಲಾ ಸೇವೆ ಸಲ್ಲಿಸಿ ತಮ್ಮ ರಂಗ ಜೀವನವನ್ನು ಮುಗಿಸಿದ ಕಲಾ ತಪಸ್ವಿ ಯಕ್ಷಗಾನದ ಬಗ್ಗೆ ಆಳ ಜ್ಞಾನವಿರುವ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅಭಿನಂದನಾರ್ಹರು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ, ಯಕ್ಷಲಹರಿ ಹಾಗೂ ಯಕ್ಷಗಾನ ಕಲಾಭಿಮಾನಿಗಳ ಆಶ್ರಯದಲ್ಲಿ ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಇತ್ತಿಚಿಗೆ ನಿಧನರಾದ ಕಟೀಲು ಮೇಳದ ಬಣ್ಣದ ವೇಷಧಾರಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಮಾತನಾಡಿ ಕಲೆಗೂ ಕಲಾವಿದನಿಗೂ ಸಾವಿಲ್ಲ ಯಕ್ಷಗಾನ ಕಲೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಗಂಗಯ್ಯ ಶೆಟ್ಟಿ ಮಹಾನ್ ಸಾಧಕ ಜನ ಮಾನಸದಲ್ಲಿ ಉಳಿಯುವಂತರು ಎಂದು ಹೇಳಿದರು.
ಗಂಗಯ್ಯ ಶೆಟ್ಟಿ ಅವರ ಬಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ನುಡಿ ನಮನ ಸಲ್ಲಿಸಲಾಯಿತು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವಾಭಿರಾಮ ಉಡುಪ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಶಿಕ್ಷಕ ಸಾಯಿನಾಥ ಶೆಟ್ಟಿ, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ , ಕಟೀಲು ರಾಮದಾಸ ಕಾಮತ್ , ನೀಲಯ್ಯ ಕೋಟ್ಯಾನ್ ಕಟೀಲು ಮತ್ತಿತರರು ಗಂಗಯ್ಯ ಶೆಟ್ಟಿಅವರ ಬಗ್ಗೆ ನುಡಿನಮನ ಗೈದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಕುಲಾಲ್, ಭಾಸ್ಕರ ಪೂಜಾರಿ, ಬಾಲಕೃಷ್ಣ ಅಮೀನ್, ಶಾರಾದಾ ಶೆಟ್ಟಿ, ಬಬಿತಾ ಶೆಟ್ಟಿ, ಬಾಲಕೃಷ್ಣ ಉಡುಪ, ಸುರೇಶ್ ಪದ್ಮನೂರು, ಗಂಗಾಧರ ಸಾಲ್ಯಾನ್, ನಿಶಾಂತ್ ಶೆಟ್ಟಿ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.
ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-28031701

Comments

comments

Comments are closed.

Read previous post:
Mulki-30031706
ಎಳತ್ತೂರು ಮನೋಜ್ ಪೂಜಾರಿಗೆ ಸನ್ಮಾನ

ಮೂಲ್ಕಿ: ಉನ್ನತ ಶಿಕ್ಷಣ ಉತ್ತಮ ನೌಕರಿ ಗಳಿಕೆಯ ಬಳಿಕ ಐಷಾರಾಮದ ಬೆನ್ನುಹತ್ತುವ ಯುವ ಸಮಾಜಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ತಿಳಿಯಲು ಮನೋಜ್ ಪೂಜಾರಿ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು...

Close