ವಿಷ್ಣು ಸಹಸ್ರನಾಮ : ಖಿನ್ನತೆ ಉದ್ವೇಗ ದೂರ

ಕಿನ್ನಿಗೋಳಿ: ದೇವರು ಎಂದರೆ ಎಲ್ಲರಿಗೂ ಆಸರೆಯಾದ ಬೆಳಕಿನ ಪುಂಜ. ಗುಣವಾಚಕ ನಾಮಗಳು ವಿವಿಧ ದೇವರಿಗೆ ಹೇಳಲ್ಪಟ್ಟವು. ಇವುಗಳಲ್ಲಿ ಲಲಿತಾ ಸಹಸ್ರನಾಮ ಹಾಗೂ ವಿಷ್ಣುಸಹಸ್ರನಾಮಗಳು ವಿಶೇಷವಾದುವು. ಧರ್ಮರಾಯನಿಗೆ ಭೀಷ್ಮನು ಪ್ರಶ್ನೆಗಳಿಗುತ್ತರವಾಗಿ ಹೇಳಿದಂತಹ ವಿಷ್ಣು ಸಹಸ್ರನಾಮಗಳ ಪಠಣದಿಂದ ಉದ್ವೇಗ ಖಿನ್ನತೆ ದೂರವಾಗುತ್ತದೆ ಎಂದು ವಿದ್ವಾಂಸ ಅತ್ತೂರು ರವೀಂದ್ರ ಹೇಳಿದರು.
ಭಾನುವಾರ ಕಟೀಲು ಸಾನ್ನಿಧ್ಯ ಸಭಾಭವನದಲ್ಲಿ ಕಟೀಲು ನಂದಿನಿ ಬ್ರಾಹ್ಮಣ ಸಭಾದ ವತಿಯಿಂದ ನಡೆದ ವಿಷ್ಣು ಸಹಸ್ರನಾಮ ಹೋಮದ ಸಂದರ್ಭ ವಿಷ್ಣು ಸಹಸ್ರನಾಮದ ಮಹತ್ವದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಸುದರ್ಶನ ಆಚಾರ್ಯ ನೇತೃತ್ವದಲ್ಲಿ ಹೋಮ ನಡೆಯಿತು. ಭಜನೆ, ಯಕ್ಷಗಾನ ಗಾಯನ ನಡೆಯಿತು. ಕಟೀಲು ದೇವಳದ ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಟೀಲು ನಂದಿನಿ ಬ್ರಾಹ್ಮಣ ಸಭಾದ ಡಾ. ಶಶಿಕುಮಾರ್, ಡಾ. ಪದ್ಮನಾಭ ಭಟ್, ವೇದವ್ಯಾಸ ಉಡುಪ, ರಾಘವೇಂದ್ರ ರಾವ್, ದಿವ್ಯದಾಸ, ವೆಂಕಟೇಶ್, ಲಕ್ಷ್ಮೀಪ್ರಸಾದ ಉಡುಪ ಮತ್ತಿತರರಿದ್ದರು.

Kinnigoli-28031705

Comments

comments

Comments are closed.

Read previous post:
Kinnigoli-28031704
ನವೀಕರಣ ಕೆರೆಕಾಡು ಬಸ್ ನಿಲ್ದಾಣ ಉದ್ಘಾಟನೆ

ಕಿನ್ನಿಗೋಳಿ:  ಕಿನ್ನಿಗೋಳಿ ಲಯನ್ಸ್ ಕ್ಲಬ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಜಂಟೀ ಆಶ್ರಯದಲ್ಲಿ ನವೀಕರಣಗೊಳಿಸಿದ ಕೆರೆಕಾಡು ಬಸ್ ನಿಲ್ದಾಣವನ್ನು ಲಯನ್ಸ್ ಜಿಲ್ಲೆ 317...

Close