ಶ್ರೀ ವೈದ್ಯನಾಥ ದೈವಸ್ಥಾನ ಧಾರ್ಮಿಕ ಸಭೆ

ಕಿನ್ನಿಗೋಳಿ: ಮಾನವನಿಗೆ ನಂಬಿಕೆ ಮುಖ್ಯ. ಕರಾವಳಿ ತುಳುನಾಡಿನ ಕಾರಣಿಕ ದೈವಗಳು ನಂಬಿದ ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುತ್ತಿವೆ. ಎಂದು ಪುರೋಹಿತ ಏಳಿಂಜೆ ಶ್ರೀಧರ ಭಟ್ ಹೇಳಿದರು.
ಕೆಮ್ಮಡೆ – ಮೂರುಕಾವೇರಿ ಶ್ರೀ ವೈದ್ಯನಾಥ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ವಾರ್ಷಿಕ ನೇಮದ ಸಂದರ್ಭ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ದೈವಸ್ಥಾನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದ ಅನಂತ ಪದ್ಮನಾಭ ರಾವ್ ಅವರನ್ನು ಸಮ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಉದ್ಯಮಿ ಸಂತೋಷ್ ಕುಮಾರ್ ಪುನರೂರು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಕೃಷ್ಣ ಶೆಟ್ಟಿ ತೆಂಡೇಲ್, ಉದ್ಯಮಿ ಶ್ರೀನಾಥ್ ಕೆಂಚನಕೆರೆ, ಉದ್ಯಮಿ ಡೊಲ್ಪಿ ಸಂತುಮಾಯೊರ್, ಜಗದೀಶ್ ಶೆಟ್ಟಿ, ಕೆ. ಬಿ. ಸುರೇಶ್, ತಾರಾನಾಥ ಶೆಟ್ಟಿ, ಲೋಕೇಶ್ ಪೂಜಾರಿ, ಸಂತೋಷ್, ನವೀನ್, ಅಶೋಕ್ ಜಲ್ಲಿಗುಡ್ಡೆ ಉಪಸ್ಥಿತರಿದ್ದರು.

Kinnigoli-28031702

Comments

comments

Comments are closed.

Read previous post:
Kinnigoli-28031701
ಗೇರುಕಟ್ಟೆ ಗಂಗಯ್ಯ ಶೆಟ್ಟಿ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ: ಕಟೀಲು ಯಕ್ಷಗಾನ ಮೇಳದಲ್ಲಿ ನಿರಂತರ 48 ವರ್ಷ ಕಲಾ ಸೇವೆ ಸಲ್ಲಿಸಿ ತಮ್ಮ ರಂಗ ಜೀವನವನ್ನು ಮುಗಿಸಿದ ಕಲಾ ತಪಸ್ವಿ ಯಕ್ಷಗಾನದ ಬಗ್ಗೆ ಆಳ ಜ್ಞಾನವಿರುವ ಗೇರುಕಟ್ಟೆ ಗಂಗಯ್ಯ...

Close