ಸುರಗಿರಿ ಆಮಂತ್ರಣ ಪತ್ರ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು – ಕೆಮ್ರಾಲ್ – ಕಿಲೆಂಜೂರು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಭಾನುವಾರ ದೇವಳದ ಆಶಾಲತಾ ನಾರಾಯಣ ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಗ್ರಾಮೀಣ ಪರಿಸರದ ನೂರಾರು ವರ್ಷಗಳ ಇತಿಹಾಸವಿರುವ ಭಕ್ತರ ಆರಾಧ್ಯ ದೇವರಾದ ಸುರಗಿರಿ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಭಕ್ತರಿಗೆ ಸೂಕ್ತ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲು ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಭಕ್ತಾಭಿಮಾನಿಗಳು ಅರ್ಹನಿಶಿ ಶ್ರಮಿಸುತ್ತಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಎನ್ ಶೆಟ್ಟಿ ಹೇಳಿದರು.
ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿ, ದೇವಳದ ಅರ್ಚಕ ವಿಶ್ವೇಶ್ವರ ಭಟ್, ಕಾರ್ಯಾದ್ಯಕ್ಷ ಅತ್ತೂರು ಬೈಲು ವೆಂಕಟರಾಜ ಉಡುಪ, ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ವೈ. ಬಾಲಚಂದ್ರ ಭಟ್, ಅನಂತರಾಮ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಲವ ಶೆಟ್ಟಿ, ಪ್ರಧಾನ ಕೋಶಾಧಿಕಾರಿ ರಮಾನಾಥ ಎನ್ ಶೆಟ್ಟಿ, ಗೌರಾವಾಧ್ಯಕ್ಷರಾದ ಅತ್ತೂರು ಭಂಡಾರ ಮನೆ ಶಂಭು ಮುಕ್ಕಾಲ್ದಿ, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ ಶೆಟ್ಟಿ, ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಪುರುಷೋತ್ತಮ ಶೆಟ್ಟಿ , ಪ್ರಶಾಂತ್ ಶೆಟ್ಟಿಗಾರ್, ಸುರಗಿರಿ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಸದಸ್ಯರು, ಅತ್ತೂರು-ಕೆಮ್ರಾಲ್-ಕಿಲೆಂಜೂರು ಗುತ್ತು ಬಾಳಿಕೆ ಪ್ರಮುಖರು ಉಪಸ್ಥಿತರಿದ್ದರು.
ಮೊಕ್ತೇಸರ ಧನಂಜಯ ಶೆಟ್ಟಿಗಾರ್ ಸಾಗರಿಕಾ ಸ್ವಾಗತಿಸಿದರು. ಜನಾರ್ಧನ ಕಿಲೆಂಜೂರು ವಂದಿಸಿದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-28031703

Comments

comments

Comments are closed.

Read previous post:
Kinnigoli-28031702
ಶ್ರೀ ವೈದ್ಯನಾಥ ದೈವಸ್ಥಾನ ಧಾರ್ಮಿಕ ಸಭೆ

ಕಿನ್ನಿಗೋಳಿ: ಮಾನವನಿಗೆ ನಂಬಿಕೆ ಮುಖ್ಯ. ಕರಾವಳಿ ತುಳುನಾಡಿನ ಕಾರಣಿಕ ದೈವಗಳು ನಂಬಿದ ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುತ್ತಿವೆ. ಎಂದು ಪುರೋಹಿತ ಏಳಿಂಜೆ ಶ್ರೀಧರ ಭಟ್ ಹೇಳಿದರು. ಕೆಮ್ಮಡೆ - ಮೂರುಕಾವೇರಿ...

Close