ಅಗರಿ ರಘುರಾಮ ಭಾಗವತ ಸನ್ಮಾನ

ಕಿನ್ನಿಗೋಳಿ: ಕಲಾವಿದನಿಗೆ ಕಲೆಯ ಬಗ್ಗೆ ಅಭಿಮಾನ ಕಲಿಯುವ ಹಂಬಲವಿದ್ದಾಗ ಮಾತ್ರ ಕಲಾವಿದ ಹಾಗೂ ಕಲೆ ಬೆಳೆಯುತ್ತದೆ. ಎಂದು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಮಂಗಳವಾರ ಕಟೀಲು ಕೊಂಡೇಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಯಕ್ಷಗಾನ ರಂಗದ ಹಿರಿಯ ಭಾಗವತ ಅಗರಿ ರಘುರಾಮ ಭಾಗವತ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ನಿವೃತ್ತ ಶಿಕ್ಷಕ ಉಮೇಶ್ ರಾವ್ ಎಕ್ಕಾರು, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ರಘುರಾಮ ರಾವ್, ರಘುಪತಿ ಭಟ್, ಗಾಯತ್ರಿ ಭಟ್, ಡಾ. ಶ್ರದ್ಧಾ, ಡಾ. ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ಲಕ್ಷ್ಮಿನಾರಾಯಣ ಭಟ್ ಸ್ವಾಗತಿಸಿದರು. ವೈಶ್ವಾನರ ಸನ್ಮಾನ ಪತ್ರ ವಾಚಿಸಿದರು. ಬಾಲಕೃಷ್ಣ ಆಚಾರ್ಯ ವಂದಿಸಿದರು. ಬಳಿಕ ಸಂರ್ಪೂಣ ಪ್ರಹ್ಲಾದ ಚರಿತ್ರೆ ಯಕ್ಷಗಾನ ತಾಳ ಮದ್ದಳೆ ನಡೆಯಿತು.

Kinnigoli-30031708

Comments

comments

Comments are closed.

Read previous post:
Kinnigoli-30031707
ಉಚಿತ ಸಮವಸ್ತ್ರ ಪುಸ್ತಕಗಳ ವಿತರಣೆ

ಕಿನ್ನಿಗೋಳಿ: ವಿಶೇಷ ಮಕ್ಕಳು ದೇವರಿಗೆ ಸಮಾನ ಅಂತವರಿಗೆ ಸಹಕಾರ ಸಹಾಯ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೂಲ್ಕಿ ಮೂಡಬಿದ್ರೆ ಜೆಡಿಎಸ್ ಅಧ್ಯಕ್ಷರಾದ ಅಶ್ವಿನ್ ಜೆ. ಪಿರೇರಾ ಹೇಳಿದರು....

Close