ಯುವ ಕೇಸರಿ ಸಂಗಮ-2017ಗೆ ಚಾಲನೆ

ಮೂಲ್ಕಿ: ರಾಜ್ಯ ಸರ್ಕಾರವು ಅಲ್ಪ ಸಂಖ್ಯಾತರನ್ನು ಓಲೈಸುವ ದೃಷ್ಠಿಯಿಂದ ಕಸಾಯಿಖಾನೆಗೆ 1.5ಕೋಟಿ ಅನುದಾನ ಆದರೆ ಮುಜರಾಯಿ ಇಲಾಖೆಗೆ ಆದಾಯದಲ್ಲಿ ಎ ಗ್ರೇಡ್ ದೇವಸ್ಥಾನವಾಗಿರುವ ಕುಕ್ಕೆಗೆ ಮಾಡು ನಿರ್ಮಿಸಲು ಸರ್ಕಾರದಲ್ಲಿ ಹಣವಿಲ್ಲದಿರುವುದು ವಿಪರ್ಯಾಸ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಮೂಲ್ಕಿ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡಿನ ವೀರ ಕೇಸರಿ ತರುಣ ವೃಂದದ ಸಂಯೋಜನೆಯಲ್ಲಿ 7ನೇ ವರ್ಷದ ಯುಗಾದಿ ಆಚರಣೆಯ ಪ್ರಯುಕ್ತ ನಡೆದ ಯುವ ಕೇಸರಿ ಸಂಗಮ-2017ಗೆ ಚಾಲನೆ ನೀಡಿ ಆಶೀರ್ವಚಿಸಿದರು.
ರಾಜ್ಯ ಸರ್ಕಾರ ಹಿಂದೂ ದಮನ ನೀತಿಯನ್ನು ಅಳವಡಿಸಿಕೊಂಡಿರುವ ಪರಿಣಾಮ ರೈತರಿಗೆ ಆತ್ಮಹತ್ಯೇಯೇ ಭಾಗ್ಯ ಎಂಬಂತಾಗಿದೆ. ಯುವ ಸಮಾಜ ಸಂಘಟಿತರಾಗಿ ಹಿಂದೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟನ್ನು ಭದ್ರ ಪಡಿಸಬೇಕು. ಸಂಘಟಿತರಾಗಿ ರಾಷ್ಟ್ರದ ಅಭ್ಯದಯಕ್ಕೆ ಪೂರಕ ಜನಪ್ರತಿನಿಧಿಗಳನ್ನು ಆರಿಸುವಲ್ಲಿ ಮುಕ್ತ ಸಹಕಾರ ನೀಡಬೇಕು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಬಳ್ಳಾರಿ ಯುವ ಬ್ರಿಗೇಡ್ ವಿಭಾಗ ಸಂಚಾಲಕ ಸಂತೋಷ್ ಸಾಮ್ರಾಟ್ ಮಾತನಾಡಿ,ಹಿಂದೂ ಧರ್ಮೋಥ್ಥಾನದ ವಿಷಯ ಎತ್ತಿದವರನ್ನು ಕೋಮುವಾದಿ ಎನ್ನಲಾಗುತ್ತದೆ. ದೇಶಕ್ಕಾಗಿ ವೀರ ಮರಣ ಪಡೆದ ಭಗತ್ ಸಿಂಗ್ ರವರ ಸಹಪಾಠಿ ಅಶ್ಪಕ್ ಉಲ್ಲಾ ಖಾನ್ ರವರ ಬಲಿದಾನವನ್ನು ಪ್ರತೀ ವರ್ಷ ನೆನಪಿಸುವ ಹಿಂದೂ ಸಮಾಜ ಕೋಮುವಾದಿಯೇ ಎಂದು ಪ್ರಶ್ನಿಸಿದ ಅವರು, ಉಂಡು ಬೆಳೆದ ತನ್ನ ರಾಷ್ಟ್ರದ ಅಭಿವೃದ್ಧಿಯನ್ನು ತನ್ನ ಸ್ವಾರ್ಥಕ್ಕಾಗಿ ಸಹಿಸದ ಎಡ ಪಂತೀಯ ವಾದಿಗಳು, ಬುದ್ದಿಜೀವಿಗಳು ಹಾಗೂ ರಾಷ್ಟ್ರ ದ್ರೋಹಿಗಳನ್ನು ವಿರೋಧಿಸ ಬೇಕು ಈ ಕಾರಣಕ್ಕೆ ಯಾವುದೇ ಜಾತಿ ಅಥವಾ ಧರ್ಮವನ್ನು ಗುರಿಯಾಗಿಸಬಾರದು. ರಾಷ್ಟ್ರ ದ್ರೋಹಿ ಯಾವ ಧರ್ಮದವನೇ ಆದರೂ ಶಿಕ್ಷೆಗೆ ಪಾತ್ರನು ಎಂದು ಯುವ ಜನತೆ ನೆನಪಿಡಬೇಕು, ದೇಶದ ಅಭಿವೃದ್ಧಿಗೆ ಶ್ರಮಿಸಿದ ರಾಷ್ಟ್ರ ಭಕ್ತರನ್ನು ಗೌರವಿಸಬೇಕು ಹಾಗೂ ಅವರ ಜೀವನ ಮೌಲ್ಯಗಳನ್ನು ಪಠ್ಯರೂಪದಲ್ಲಿ ಚರಿತ್ರೆಯಾಗಿ ಯುವ ಜನರಿಗೆ ಭೋಧಿಸುವಂತಾಗಬೇಕು ಎಂದರು.ನಮ್ಮ ಧಾರ್ಮೀಕ ಹಬ್ಬ ಹರಿದಿನಗಳ ಮಹತ್ವದ ಸಹಿತ ಯುವ ಜನರಿಗೆ ತಿಳಿಸಿ ಸಂಘಟನಾತ್ಮಕವಾಗಿ ಬಲಶಾಲಿಯಾಗುವ ಯತ್ನ ಸದಾ ನಡೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ ವಹಿಸಿದ್ದರು.
ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ವೀರ ಕೇಸರಿ ತರುಣ ವೃಂದದ ಅಧ್ಯಕ್ಷ ಬಸು ವಿವೇಕ್ ಮೂಲ್ಕಿ ಉಪಸ್ಥಿತರಿದ್ದರು.
ಬಸು ವಿವೇಕ್ ಸ್ವಾಗತಿಸಿದರು.ವೀರಣ್ಣ ಅರಳಗುಂಡಿಗೆ ವಂದೇ ಮಾತರಂ ಹಾಡಿದರು. ವೀರಭದ್ರ ಹಿರೇಮಠ ಪ್ರಸ್ಥಾವಿಸಿ, ವರದಿ ಮಂಡಿಸಿದರು.ಮಂಜುನಾಥ ಡಿ ನಿರೂಪಿಸಿ ವಂದಿಸಿದರು.

30031701

Comments

comments

Comments are closed.

Read previous post:
Kinnigoli-28031706
ವಿಶ್ವ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ಸಮಾಜದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ರೋಹಿಣಿ ನವೀನ್ ನೇತ್ರತ್ವದಲ್ಲಿ ಬಹುಮುಖ ಪ್ರತಿಭೆ ಸುಮತಿ ಶೆಟ್ಟಿ...

Close