ಅತ್ತೂರು ವರ್ಷಾವಧಿ ಜಾತ್ರೆ

ಕಿನ್ನಿಗೋಳಿ: ನಾವು ಮಾಡುವ ಸತ್ಕರ್ಮಗಳು ಭಗವಂತನಿಗೆ ಅರ್ಪಿತವಾಗಬೇಕು. ದೈವಸ್ಥಾನದ ಆಡಳಿತ ಮಂಡಳಿ ಪ್ರಧಾನವಾಗಿ ಧಾರ್ಮಿಕತೆಗೆ ಒತ್ತು ನೀಡಿ ಸಾಧಕರಿಗೆ ಗೌರವ, ಶಿಕ್ಷಣಕ್ಕೆ ಬೆಂಬಲ ಹಾಗೂ ಸಾಮಜಿಕ ಕಳಕಳಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಹೇಳಿದರು.
ಕಿನ್ನಿಗೋಳಿ ಸಮೀಪದ ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಒಳಪಟ್ಟ ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಮಂಗಳವಾರ ನಡೆದ ವರ್ಷಾವಧಿ ಜಾತ್ರೆಯ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ನಾಯಕ ಜಿತೇಂದ್ರ ಕೊಟ್ಟಾರಿ ಧಾರ್ಮಿಕ ಉಪನ್ಯಾಸ ನೀಡಿದರು.
ಶಂಭು ಮುಕ್ಕಾಲ್ದಿ ಭಂಡಾರ ಮನೆ ಅತ್ತೂರು, ಕಾಂತೇರಿ ಧೂಮಾವತಿ ದೈವದ ಪಾತ್ರಿ ಕಾಚೂರು ಶೇಖರ ಮುಕಾಲ್ದಿ, ಶ್ಯಾಮರಾಯ ಶೆಟ್ಟಿ ಗೋಳಿದಡಿ ಕಿಲೆಂಜೂರು ಅವರನ್ನು ಸನ್ಮಾನಿಸಲಾಯಿತು.
ದಿ. ಪ್ರಖ್ಯಾತ ಆರ್ ಶೆಟ್ಟಿ ಸ್ಮರಣಾರ್ಥ ದೇವಿ ಪ್ರಸಾದ್ ಅತ್ತೂರು, ರಕ್ಷಿತ್ ಸಾಲ್ಯಾನ್ ಕೆಮ್ರಾಲ್, ಸಂಧ್ಯಾ ಕಿಲೆಂಜೂರು ಅವರಿಗೆ ಸಹಾಯಧನ ವಿತರಿಸಲಾಯಿತು.
ಅತ್ಯಧಿಕ ಅಂಕ ಗಳಿಸಿದ ಯತಿರಾಜ್ ಅತ್ತೂರು ಕಾಪಿಕಾಡು,. ಮಲ್ಲಿಕಾ ಕೆಮ್ರಾಲ್, ಸೌಭಾಗ್ಯ ಕಿಲೆಂಜೂರು ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. :
ನೀಲಯ್ಯ ಪೂಜಾರಿ ಅತ್ತೂರು, ಮಹಮ್ಮದ್ ಪಕ್ಷಿಕೆರೆ, ಕಮಲ ಪೂಜಾರ‍್ತಿ ಅವರಿಗೆ ಆರ್ಥಿಕ ನೆರವು ನೀಡಲಾಯಿತು.
ಭಾಸ್ಕರ ಶೆಟ್ಟಿ ಕುಡ್ತಿಮಾರುಗುತ್ತು, ಹರೀಶ್ ಶೆಟ್ಟಿ ಮಜಲಗುತ್ತು, ಐಕಳ ಗಣೇಶ್ ವಿ. ಶೆಟ್ಟಿ , ಐಕಳ ವಿಶ್ವನಾಥ ಶೆಟ್ಟಿ, ಪ್ರಸನ್ನ ಎಲ್ ಶೆಟ್ಟಿ, ಮಯ್ಯದ್ದಿ ಪಕ್ಷಿಕೆರೆ, ಸಂದೇಶ್ ಹೊಸಬೆಟ್ಟು , ಶಿವಶಂಕರ ಶೆಟ್ಟಿ ಕೊಜಪಾಡಿ ಬಾಳಿಕೆ ಅವರಿಗೆ ಗೌರವಾರ್ಪಣೆ ನಡೆಯಿತು.
ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಜೆ.ಡಿ.ಎಸ್ ನಾಯಕ ಅಶ್ವಿನ್ ಜೆ. ಪಿರೇರಾ, ತುಳು ಆಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ತಿಮ್ಮ ಕಾವರು ಕಾವರ ಮನೆ ಎಕ್ಕಾರು, ಉದ್ಯಮಿ ಸುಧಾಕರ ಪೂಂಜಾ, ರಾಕೇಶ್ ಶೆಟ್ಟಿ ಅತ್ತೂರು ಗುತ್ತು, ಶಂಕರ ಬಿ. ಶೆಟ್ಟಿ ಮೂಡ್ರಗುತ್ತು, ಜಗನ್ನಾಥ ವಿ. ಶೆಟ್ಟಿ ಅತ್ತೂರು ಕೊಜಪಾಡಿಬಾಳಿಕೆ, ಜಯ ಶೆಟ್ಟಿ ಮಜಲಗುತ್ತು ಮತ್ತಿತರರು ಉಪಸ್ಥಿತರಿದ್ದರು.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಅತ್ತೂರು ಕೊಜಪಾಡಿ ಬಾಳಿಕೆ, ಗಣೇಶ್ ವಿ. ಶೆಟ್ಟಿ ಐಕಳ, ಲೀಲಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಪ್ರಸನ್ನ ಎಲ್ ಶೆಟ್ಟಿ ಅತ್ತೂರುಗುತ್ತು ಪ್ರಸ್ತಾವನೆಗೈದರು. ರಾಜೇಶ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-31031703

Comments

comments

Comments are closed.

Read previous post:
31031701
ತಾಂತ್ರಿಕತೆಗೆ ಉಜ್ವಲ ಅವಕಾಶ

ಹಳೆಯಂಗಡಿ: ಬಿಕಾಂ ಮತ್ತು ಬಿಬಿಎಂ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವಿಪುಲ ಉದ್ಯೋಗ ಅವಕಾಶಗಳಿವೆ, ಉತ್ತಮ ವ್ಯಾವಹಾರಿಕ ತಾಂತ್ರಿಕತೆಗೆ ಉಜ್ವಲ ಭವಿಷ್ಯವಿದೆ ಎಂದು...

Close