ತಾಂತ್ರಿಕತೆಗೆ ಉಜ್ವಲ ಅವಕಾಶ

ಹಳೆಯಂಗಡಿ: ಬಿಕಾಂ ಮತ್ತು ಬಿಬಿಎಂ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವಿಪುಲ ಉದ್ಯೋಗ ಅವಕಾಶಗಳಿವೆ, ಉತ್ತಮ ವ್ಯಾವಹಾರಿಕ ತಾಂತ್ರಿಕತೆಗೆ ಉಜ್ವಲ ಭವಿಷ್ಯವಿದೆ ಎಂದು ಸಂತ ಜೋಸೆಫ್ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ವಿಭಾಗದ ಡೀನ್ ಡಾ. ಪ್ರಕಾಶ್ ಪಿಂಟೋ ಶಿರ್ತಾಡಿ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇದರ ಕೆರಿಯರ್ ಗೈಡೆನ್ಸ್ ಮತ್ತು ಪ್ಲೇಸ್ ಮೆಂಟ್ ಸೆಲ್ ಇದರ ಜಂಟಿ ಆಶಯದಲ್ಲಿ ಜರುಗಿದ ಯು.ಜಿ.ಸಿ ಪ್ರಾಯೋಜಿತ ವೃತ್ತಿ ಮಾರ್ಗದರ್ಶನ ಕಾರ್ಯಗಾರದಲ್ಲಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಸಂವಹನ ಶೀಲರಾಗಿರಬೇಕು ಮತು ಸಂವಹನೆಯಲ್ಲಿ ಕ್ಷಮತೆ ಸುಧಾರಿಸಿದಲ್ಲಿ ವಿದ್ಯಾರ್ಥಿಗಳ ಕಾರ್ಯ ನಿರ್ವಣೆಯ ಗುಣಮಟ್ಟ ಹೆಚ್ಚುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ್ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಚ್. ವಸಂತ್ ಬೆರ್ನಾಡ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು ಸಂಯಮವನ್ನು ಮೈಗೂಡಿಸಿಕೊಳ್ಳಬೇಕು, ಒರ್ವ ಉತ್ತಮ ನಾಯಕತ್ವನಾಗಲು ಆತನಿಗೆ ವ್ಯಾವಹಾರಿಕತೆ ಕುಶಲತೆಯೂ ಸಹ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತ್ತಿಗಳಾಗಿ ಸಂತ ಜೋಸೆಫ್ ತಾಂತ್ರಿಕ ವಿದ್ಯಾಲಯ ಎಂ.ಬಿ.ಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ವಿನೀಶ್ ಪಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶಶಿಕಲಾ ಕೆ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಪಿ.ಬಿ. ಪ್ರಸನ್ನ ಉಪಸ್ಥತರಿದ್ದರು.
ಕೆರಿಯರ್ ಗೈಡೆನ್ಸ್ ಮತ್ತು ಪ್ಲೇಸ್ ಮೆಂಟ್ ಸೆಲ್ ನ ಸಂಯೋಜಕ ಡಾ.ಸಂತೋಷ್ ಪಿಂಟೋ ಶಿರ್ತಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು, ಭವ್ಯ ವಂದಿಸಿದರು. ದಿವ್ಯ ಮತ್ತು ಮುಕ್ತಾರ್ ಪರಿಚಯಿಸಿದರು, ಪೂಜಾ ನಿರೂಪಿಸಿದರು.

31031701

Comments

comments

Comments are closed.

Read previous post:
Kinnigoli-30031708
ಅಗರಿ ರಘುರಾಮ ಭಾಗವತ ಸನ್ಮಾನ

ಕಿನ್ನಿಗೋಳಿ: ಕಲಾವಿದನಿಗೆ ಕಲೆಯ ಬಗ್ಗೆ ಅಭಿಮಾನ ಕಲಿಯುವ ಹಂಬಲವಿದ್ದಾಗ ಮಾತ್ರ ಕಲಾವಿದ ಹಾಗೂ ಕಲೆ ಬೆಳೆಯುತ್ತದೆ. ಎಂದು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು. ಮಂಗಳವಾರ ಕಟೀಲು...

Close