ಕನ್ನಡ ಚಿತ್ರ ರಂಗದ ಆಧಾರ ಸ್ತಂಭ ರಾಕ್ ಲ್ಯೆನ್

ಬೆಂಗಳೂರು: ರಾಕ್ ಲ್ಯೆನ್ ವೆಂಕಟೇಶ್ ರವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಪರೋಪಕಾರ ಸ್ವಭಾವದವರಾಗಿದ್ದು ಚಲನಚಿತ್ರ ರಂಗದಲ್ಲಿನ ಸಮಸ್ಯೆಗಳನ್ನು ತನ್ನಲ್ಲಿರುವ ಸಾಮರ್ಥ್ಯದಿಂದ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದಾರೆ.ಕನ್ನಡ ಚಲನಚಿತ್ರ ರಂಗದ ಆಧಾರ ಸ್ತಂಭವಾಗಿರುವ ಅವರಿಗೆ ರಾಷ್ತ್ರ,ಅಂತರಾಷ್ತ್ರೀಯ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಗುರುತಿಸಿ ಕೊಳ್ಳಲಿದ್ದಾರೆಂದು ಆಧ್ಯಾತ್ಮಿಕ ಗುರು, ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ,ವ್ಯೆಜ್ಞಾನಿಕ ಜ್ಯೋತಿಷಿ ಬೆಂಗಳೂರಿನ ಆರ್ ಟಿ ನಗರದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಹೇಳಿದರು.
ಕನ್ನಡ ಚಲನಚಿತ್ರ ಹಾಗೂ ಬಾಲಿವುಡ್ ನ ನಿರ್ಮಾಪಕ ರಾಕ್ ಲ್ಯೆನ್ ವೆಂಕಟೇಶ್ ರವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನ ಆರ್ ಟಿ ನಗರದ ಸ್ವಾಮೀಜಿಯವರ ಆಶ್ರಮದಲ್ಲಿ ಜರಗಿದ ಸಮಾರಂಭದಲ್ಲಿ ರಾಕ್ ಲ್ಯೆನ್ ವೆಂಕಟೇಶ್ ರವರನ್ನು ಸನ್ಮಾನಿಸಿ ಮಾತನಾಡಿದ ಅವರು ಸುಮಾರು 20 ವರ್ಷಗಳ ಹಿಂದೆ ರಾಕ್ ಲ್ಯೆನ್ ವೆಂಕಟೇಶ್ ರವರಲ್ಲಿನ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯವಿದೆಯೆಂದು ತಿಳಿಸಿದ್ದು ಅಪಾರ ದ್ಯೆವ ಭಕ್ತರಾಗಿರುವ ಅವರು ತನ್ನ ಸ್ವ ಸಾಮರ್ಥ್ಯದಿಂದ ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ.ಎಲ್ಲರನ್ನು ಜೊತೆಗೂಡಿಸಿ ಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿದೆ.ಅವರ ಚಲನಚಿತ್ರ ಗಳು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಕಾರ್ಯ ಮಾಡುತ್ತಿದೆ.ಅವರು ಈಗಾಗಲೇ ಬಾಲಿವುಡ್ ನಲ್ಲಿ ತನ್ನ ಸಾಮರ್ಥ್ಯವನ್ನು ತೋರಿದ್ದು ಮುಂದಿನ ದಿನಗಳಲ್ಲಿ ಹಾಲಿವುಡ್ ನಲ್ಲಿ ತನ್ನ ಸಾಮಾರ್ಥ್ಯವನ್ನು ಬಿಂಬಿಸಲಿದ್ದಾರೆ.ಅವರ ಭವಿಷ್ಯವು ಉಜ್ವಲವಾಗಲೆಂದು ಹಾರ‍್ಯೆಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಲನಚಿತ್ರ ನಿರ್ಮಾಪಕ ರಾಕ್ ಲ್ಯೆನ್ ವೆಂಕಟೇಶ್ ರವರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದು 22 ವರ್ಷಗಳ ಹಿಂದೆ ಸಾಮಾನ್ಯ ವ್ಯಕ್ತಿಯಾಗಿದ್ದ ತಾನು ಇಂದು ಈ ಮಟ್ಟಕ್ಕೆ ಬೆಳೆಯಲು ಸ್ವಾಮೀಜಿಯವರ ಆಶೀರ್ವಾದ ಕಾರಣ.ಅವರಲ್ಲಿರುವ ಜ್ಞಾನವನ್ನು ವಿದೇಶಿಗರು ಗುರುತಿಸಿ ಗೌರವಿಸಿದ್ದಾರೆ.ಅವರ ಮಾರ್ಗದರ್ಶನದಂತೆ ತಾನು ಚಲನಚಿತ್ರ ರಂಗವನ್ನು ಆರಿಸಿ ಕೊಂಡಿದ್ದು ಇಂದಿಗೂ ತಾನು ಅವರ ಮಾರ್ಗದರ್ಶನದಂತೆ ಮುಂದುವರಿಯುತ್ತಿದ್ದೇನೆ.ಅವರಿಂದ ಸಮಾಜಕ್ಕೆ ಇನ್ನಷ್ತು ಸೇವೆಗಳು ದೊರೆಯಲೆಂದು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾ ಮಂಜುನಾಥ ಹೆಗ್ಡೆ,ಸಾಧಿಕ್ ಅಹ್ಮದ್,ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್,ಗಿರೀಶ್ ಕಾಮತ್ ಮತ್ತಿತರಿದ್ದರು.

31031703

Comments

comments

Comments are closed.

Read previous post:
ಮಲೇರಿಯಾ ಮತ್ತು ಸಕ್ಕರೆ ಅಂಶ ಪರೀಕ್ಷೆ ಜಾಗ್ರತಿ

ಮೂಲ್ಕಿ: ಆಧುನೀಕ ಜೀವನ ಪದ್ದತಿ, ಶೈಕ್ಷಣಿಕ ಹಾಗೂ ಪೋಷಕರ ಮಹಾತ್ವಾಕಾಕ್ಷೆಯಿಂದ ಮಕ್ಕಳಲ್ಲಿ ರಕ್ತದ ಒತ್ತಡ ಹಾಗೂ ಸಕ್ಕರೆ ಖಾಯಿಲೆ ಕಾಣಿಸಿಕೊಳ್ಳುತ್ತಿರುವ ಪರಿಣಾಮ ಈ ದಿನಗಳಲ್ಲಿ ರಕ್ತ ತಪಾಸಣೆ ಬಹಳ...

Close