ಕಟೀಲು ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

ಕಿನ್ನಿಗೋಳಿ: ಮಾನಸಿಕ ಮತ್ತು ಬೌದ್ಧಿಕ ವಿಕಸನಕ್ಕೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡೆ ಬಗ್ಗೆ ಗಮನವಿಟ್ಟಾಗ ವಿದ್ಯಾರ್ಥಿಗಳಲ್ಲಿ ಸರ್ವೋತೋಮುಖ ಬೆಳವಣಿಗೆ ಸಾಧ್ಯ ಎಂದು ಎಡಪದವು ಮಿಜಾರು ಶ್ರೀ ಶಾಸ್ತವು ಭೂತನಾಥೇಶ್ವರ ದೇವಳದ ಆಡಳಿತ ಮಂಡಳಿ ಮುಖ್ಯಸ್ಥ ವಿಜಯನಾಥ ವಿಠಲ ಶೆಟ್ಟಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಝೇಂಕಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳದ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ , ಶ್ರೀಹರಿನಾರಾಯಣ ದಾಸ ಆಸ್ರಣ್ಣ , ಸುಧೀರ್ ಶೆಟ್ಟಿ ಶೆಟ್ಟಿ ಕೊಡೆತ್ತೂರುಗುತ್ತು, ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್ ಮಹಾ ಪ್ರಬಂಧಕ ರತ್ನಾಕರ ಶೆಟ್ಟಿ, ಕಾಲೇಜು ವಿದ್ಯಾರ್ಥಿ ನಾಯಕ ಪ್ರಜ್ವಲ್ ನಾಯಕ್, ಉಪಾಧ್ಯಕ್ಷ ಮನೀಷ್ ಶೆಟ್ಟಿ, ಕಾರ್ಯದರ್ಶಿ ಮನಿಷ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಕಾಲೇಜು ಉಪನ್ಯಾಸಕ ಸುರೇಶ್ ಸ್ವಾಗತತಿಸಿದರು. ಪ್ರಿನ್ಸಿಪಾಲ್ ಎಮ್. ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಡಾ. ಕೃಷ್ಣ ವಂದಿಸಿದರು. ಉಪನ್ಯಾಸಕ ಪರಮೇಶ್ವರ ಸಿ. ಎಚ್ ಕಾರ್ಯಕ್ರಮ ನಿರೂಪಿಸಿದರು.

Kinnigoli-31031704

Comments

comments

Comments are closed.

Read previous post:
Kinnigoli-31031703
ಅತ್ತೂರು ವರ್ಷಾವಧಿ ಜಾತ್ರೆ

ಕಿನ್ನಿಗೋಳಿ: ನಾವು ಮಾಡುವ ಸತ್ಕರ್ಮಗಳು ಭಗವಂತನಿಗೆ ಅರ್ಪಿತವಾಗಬೇಕು. ದೈವಸ್ಥಾನದ ಆಡಳಿತ ಮಂಡಳಿ ಪ್ರಧಾನವಾಗಿ ಧಾರ್ಮಿಕತೆಗೆ ಒತ್ತು ನೀಡಿ ಸಾಧಕರಿಗೆ ಗೌರವ, ಶಿಕ್ಷಣಕ್ಕೆ ಬೆಂಬಲ ಹಾಗೂ ಸಾಮಜಿಕ ಕಳಕಳಿಯ ಕಾರ್ಯಕ್ರಮ...

Close