ಕಾಳಿಕಾಂಬಾ ದೇವಳ ಸಮಿತಿ ಉದ್ಘಾಟನೆ

ಮೂಲ್ಕಿ:  ಕಟಪಾಡಿಯ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ ಸರಸ್ವತಿ ಪೀಠದ ಗುರು ಸೇವಾ ಪರಿಷತ್ ಕೇಂದ್ರ ಸಮಿತಿಯ ಕೊಲಕಾಡಿ,ಮೂಲ್ಕಿ,ಹೆಜಮಾಡಿ,ಕವತ್ತಾರು,ಕಿನ್ನಿಗೋಳಿ,ಹಳೆಯಂಗಡಿ ಮತ್ತು ಸುರತ್ಕಲ್ ಅನ್ನು ಒಳಗೊಂಡ ಕೊಲಕಾಡಿ ಕಾಳಿಕಾಂಬಾ ದೇವಸ್ಠಾನ ವಲಯ ಸಮಿತಿಯ ಉದ್ಘಾಟನೆಯು ಎಪ್ರಿಲ್ 2 ರ ರವಿವಾರ ಬೆಳಿಗ್ಗೆ ಕೊಲಕಾಡಿಯಲ್ಲಿ ಜರಗಲಿದೆ.  ಕಟಪಾಡಿಯ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಠಾನ ಸರಸ್ವತಿ ಪೀಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ಸಮಿತಿಯ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ.ಅಧ್ಯಕ್ಷತೆಯನ್ನು ಕೊಲಕಾಡಿ ಕಾಳಿಕಾಂಬಾ ದೇವಸ್ಥಾನದ 2ನೇ ಮೊಕ್ತೇಸರ ಸುರೇಶ್ ಆಚಾರ್ಯ ವಹಿಸಲಿದ್ದಾರೆ. ಕಟಪಾಡಿಯ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ ಸರಸ್ವತಿ ಪೀಠದ ಅಧ್ಯಕ್ಷ  ಸುಧಾಕರ ಆಚಾರ್ಯ ತ್ರಾಸಿ,ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ತಾನದ 3ನೇ ಮೊಕ್ತೇಸರ ಕೆ ಸದಾನಂದ ಆಚಾರ್ಯ,1ನೇ ಕೂಡುವಳಿಕೆ ಮೊಕ್ತೇಸರ ಅಚ್ಯುತ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-31031705
ಅರಸುಕುಂಜಿರಾಯ ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಅರಸು ಕುಂಜಿರಾಯ ನೇಮೋತ್ಸವ ಮಂಗಳವಾರ ನಡೆಯಿತು.

Close