ಮಲೇರಿಯಾ ಮತ್ತು ಸಕ್ಕರೆ ಅಂಶ ಪರೀಕ್ಷೆ ಜಾಗ್ರತಿ

ಮೂಲ್ಕಿ: ಆಧುನೀಕ ಜೀವನ ಪದ್ದತಿ, ಶೈಕ್ಷಣಿಕ ಹಾಗೂ ಪೋಷಕರ ಮಹಾತ್ವಾಕಾಕ್ಷೆಯಿಂದ ಮಕ್ಕಳಲ್ಲಿ ರಕ್ತದ ಒತ್ತಡ ಹಾಗೂ ಸಕ್ಕರೆ ಖಾಯಿಲೆ ಕಾಣಿಸಿಕೊಳ್ಳುತ್ತಿರುವ ಪರಿಣಾಮ ಈ ದಿನಗಳಲ್ಲಿ ರಕ್ತ ತಪಾಸಣೆ ಬಹಳ ಅಗತ್ಯ ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ಧರ್ಮಗುರುಗಳಾದ ಫಾ. ಪ್ರಾನ್ಸಿಸ್ ಝೇವಿಯರ್ ಗೋಮ್ಸ್ ಹೇಳಿದರು.
ಮೂಲ್ಕಿ ನಗರ ಪಂಚಾಯಿತಿ, ಮೂಲ್ಕಿ ರೋಟರಿ ಕ್ಲಬ್ ವತಿಯಿಂದ ದೇರಳಕಟ್ಟೆ ಕೆ.ಎಸ್.ಹೆಗಡೆ ಮೆಡಿಕಲ್ ಅಕಾಡಮಿ ಸಹಯೋಗದಲ್ಲಿ ಮಲೇರಿಯಾ ಜಾಗ್ರತಿ , ರಕ್ತದಲ್ಲಿ ಹಿಮೋಗ್ಲೋಬಿನ್ ಮತ್ತು ಸಕ್ಕರೆ ಅಂಶ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪರಿಸರ ರಕ್ಷಣೆ ಶುದ್ದ ನೀರು ಬಳಕೆ, ಉತ್ತಮ ಗುಣ ಮೌಲ್ಯದ ಆಹಾರ ಸೇವನೆ, ನಿಯಮಿತ ವ್ಯಾಯಾಮದ ಮೂಲಕ ಉತ್ತಮ ಆರೋಗ್ಯ ಗಳಿಕೆ ಸಾಧ್ಯವಾಗಲು ವಿದ್ಯಾರ್ಥಿಗಳು ಶೈಕ್ಷಣಿಕ ಕಾರ್ಯದ ಜೊತೆಗೆ ಮನೆಯಲ್ಲಿ ಹೆತ್ತವರಿಗೆ ಸಹಕಾರಿಗಳಾಗಿ ಬೆಳೆದರೆ ಉತ್ತಮ ಆರೋಗ್ಯ ಗಳಿಕೆ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ಜೋನ್ ವಿಲ್ಸನ್ ಡಿಸೋಜಾ ವಹಿಸಿದ್ದರು.
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ನಾಗರತ್ನಾ ಮಲೇರಿಯಾ ಡೆಂಗ್ಯೂ ಬಗ್ಗೆ ಮಾಹಿತಿ ನೀಡಿದರು.
ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ಡಾ. ನಂಜೇಶ್,ಡಾ. ರಾಜೇಶ್, ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷೆ ಮೋಲಿ ಡಿಸೋಜಾ,ಮೂಲ್ಕಿ ನಗರ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿಎಂ ಉಪಸ್ಥಿತರಿದ್ದರು. ಜೋನ್ ವಿಲ್ಸನ್ ಡಿಸೋಜಾ ಸ್ವಾಗತಿಸಿದರು. ರವಿಚಂದ್ರ ವಂದಿಸಿದರು.

31031702

Comments

comments

Comments are closed.

Read previous post:
Kinnigoli-31031707
ಆಚರಣೆ, ಅನುಷ್ಠಾನಗಳು ಸಮೃದ್ಧಿಗೆ ಕಾರಣ

ಸುರತ್ಕಲ್: ಪರಂಪರೆ, ಸಾಮರಸ್ಯ, ಜೀವನ ಕ್ರಮಗಳ ಅರಿವು ಆಚರಣೆ, ಅನುಷ್ಠಾನಗಳು ಸಮಾಜದ ಸಮೃದ್ಧಿಗೆ ಕಾರಣವಾಗುತ್ತದೆ ಎಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ರಮಾನಂದ ಭಟ್ ಹೇಳಿದರು....

Close