ಆಚರಣೆ, ಅನುಷ್ಠಾನಗಳು ಸಮೃದ್ಧಿಗೆ ಕಾರಣ

ಸುರತ್ಕಲ್: ಪರಂಪರೆ, ಸಾಮರಸ್ಯ, ಜೀವನ ಕ್ರಮಗಳ ಅರಿವು ಆಚರಣೆ, ಅನುಷ್ಠಾನಗಳು ಸಮಾಜದ ಸಮೃದ್ಧಿಗೆ ಕಾರಣವಾಗುತ್ತದೆ ಎಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ರಮಾನಂದ ಭಟ್ ಹೇಳಿದರು.
ಕೃಷ್ಣಾಪುರ ಏಳನೇ ವಿಭಾಗ ಸುರತ್ಕಲ್ ಶ್ರೀ ಸಾರಾಳಾ ಧೂಮಾವತಿಮ ದೈವಸ್ಥಾನದ ನೂತನ ಶಿಲಾಮಯ ಆರೂಢದಲ್ಲಿ ಶ್ರೀಸಾರಾಳ ಧೂಮಾವತಿ ಬಂಟ ಪರಿವಾರ ದೈವಗಳ ಪುನರ್‌ಪ್ರತಿಷ್ಠೆ ಕಲಶಾಭಿಷೇಕ ಪ್ರಯುಕ್ತ ಬುಧವಾರ ನಡೆದ ಉಗ್ರಾಣ ಮುಹೂರ್ತವನ್ನು ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಜ್ಯೋತಿಷಿ ಕದ್ರಿ ಶ್ರೀರಂಗ ಐತಾಳ್, ಪುರೋಹಿತ ಜಗದೀಶ್ ಐತಾಳ್, ಜೀರ್ಣೋದ್ದಾರ ಸಮಿತಿ ಪ್ರಧಾನ ಗೌರವಾಧ್ಯಕ್ಷ ಬೈಕಂಪಾಡಿ ಗುತ್ತು ಸುಭಾಷ್ ಶೆಟ್ಟಿ, ಗೌರವಾಧ್ಯಕ್ಷ ಶ್ರೀಧರ ಬಿ.ಕೋಟ್ಯಾನ್, ಕಾರ್ಯಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಮೂರ್ತಿ ಸುರತ್ಕಲ್, ಆಡಳಿತ ಸಮಿತಿ ಅಧ್ಯಕ್ಷ ದೇವೇಂದ್ರ ಡಿ.ಕೋಟ್ಯಾನ್, ಪ್ರಧಾನ ಅರ್ಚಕ ಜಗನ್ನಾಥ್ ಎಸ್. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-31031707

Comments

comments

Comments are closed.

Read previous post:
ಕಾಳಿಕಾಂಬಾ ದೇವಳ ಸಮಿತಿ ಉದ್ಘಾಟನೆ

ಮೂಲ್ಕಿ:  ಕಟಪಾಡಿಯ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ ಸರಸ್ವತಿ ಪೀಠದ ಗುರು ಸೇವಾ ಪರಿಷತ್ ಕೇಂದ್ರ ಸಮಿತಿಯ ಕೊಲಕಾಡಿ,ಮೂಲ್ಕಿ,ಹೆಜಮಾಡಿ,ಕವತ್ತಾರು,ಕಿನ್ನಿಗೋಳಿ,ಹಳೆಯಂಗಡಿ ಮತ್ತು ಸುರತ್ಕಲ್ ಅನ್ನು ಒಳಗೊಂಡ ಕೊಲಕಾಡಿ...

Close