ಎಪಿಎಂಸಿ ಅಧ್ಯಕ್ಷ ಪ್ರಮೋದ್‌ಕುಮಾರ್ ಸನ್ಮಾನ

ಕಿನ್ನಿಗೋಳಿ: ಪ್ರಮೋದ್ ಕುಮಾರ್ ಈ ಹಿಂದೆ ಪ್ರಚಾರ ರಹಿತವಾಗಿ ಹಲವಾರು ಯೋಜನೆಯನ್ನು ಕಿನ್ನಿಗೋಳಿ ಪರಿಸರಕ್ಕೆ ನೀಡಿದ್ದು ಜನಪರ ಕಾಳಜಿಯಿಂದ ಈದೀಗ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ರೈತಾಪಿ ವರ್ಗದವರ ಸಮಸ್ಯೆ ಸವಾಲುಗಳನ್ನು ಪರಿಹರಿಸಲು ಕಾರ್ಯತತ್ಪರರಾಗಿ ನಮ್ಮ ಊರಿಗೆ ಕೀರ್ತಿ ತರಬೇಕು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಹೇಳಿದರು.
ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಎಸೋಸಿಯೇಶನ್ ಶಾಂತಿನಗರ ತಾಳಿಪಾಡಿ ನೇತೃತ್ವದಲ್ಲಿ ಹಾಗೂ ತಾಳಿಪಾಡಿ ಶಾಂತಿನಗರ ಪರಿಸರದ ಗ್ರಾಮಸ್ಥರ ಪರವಾಗಿ ಶುಕ್ರವಾರ ಗುತ್ತಕಾಡು ಗ್ರೀನ್ ಸ್ಟಾರ್ ಕಚೇರಿ ಎದುರುಗಡೆಯಲ್ಲಿ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಮೋದ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾ. ಪಂ. ಉಪಾಧ್ಯಕ್ಷೆ ಸುಜಾತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಗ್ರಾಮ ಪಂಚಾಯಿತಿ ಸದಸ್ಯರಾದ ವಾಣಿ, ಅರುಣ್ ಕುಮಾರ್. ಸಂತೋಷ್, ಸುನೀತಾ ರೋಡ್ರಿಗಸ್, ಟಿ. ಎಚ್. ಮಯ್ಯದ್ದಿ, ಶಾಂತಿನಗರ ಕೆ.ಜೆ.ಎಮ್. ಅಧ್ಯಕ್ಷ ಅಬ್ದುಲ್ ರೆಹ್‌ಮಾನ್, ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಎಸೋಸಿಯೇಶನ್ ಅಧ್ಯಕ್ಷ ಗುಲಾಂ ಹುಸೇನ್, ಕಪ್ತಾನ ಟಿ. ಎ. ಹನೀಫ್ ಮತ್ತಿತರರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಟಿ. ಕೆ. ಅಬ್ದುಲ್ ಖಾದರ್ ಸ್ವಾಗತಿಸಿದರು. ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-01041702

Comments

comments

Comments are closed.

Read previous post:
Kinnigoli-01041701
ರಾಜ್ಯಮಟ್ಟದ ಯುವಕ ಮಂಡಲ ಪ್ರಶಸ್ತಿ

ಕಿನ್ನಿಗೋಳಿ: 2015-16ರ ಸಾಲಿನಲ್ಲಿ ಯುವಕಾರ್ಯ, ಕ್ರೀಡೆ, ಸಾಮಾಜಿಕ ಸಾಂಸ್ಕ್ರತಿಕ ಮತ್ತು ಸಮುದಾಯ ಅಭಿವ್ರದ್ದಿ ಕಾರ್ಯಕ್ರಮಗಳ ಮೂಲಕ ಮಾಡಿದ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರ ಯುವ ಕಾರ್ಯ...

Close