ಉಚಿತ ದಂತಚಿಕಿತ್ಸಾ ಶಿಬಿರ

ಬಜ್ಪೆ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ಕಿನ್ನೋಳಿ, ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ದಂತಚಿಕಿತ್ಸಾ ಶಿಬಿರವು ಬಜ್ಪೆಯ ಹೋಲಿ ಫ್ಯಾಮಿಲಿ ಹೈಸ್ಕೂಲ್ ಸಭಾಂಗಣದಲ್ಲಿ ರವಿವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿಡ್ಡೋ ಡಿ ಚಾವಡಿ ಮನೆ, ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಚಿಂತನೆಗಳು ನಡೆಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.
ಉಚಿತ ತಪಾಸಣೆಗಳೆಂದರೆ ಜನರಲ್ಲಿ ತಾತ್ಸಾರ ಮನೋಭಾವನೆ ಮೂಡುತ್ತದೆ. ಆದರೆ, ಹಣ ನೀಡಿ ಚಿಕಿತ್ಸೆ ನೀಡುವ ವ್ಯದ್ಯರೇ ಉಚಿತ ತಪಾಸಣಾ ಶಿಬಿರಗಲಲ್ಲಿ ಭಾಗವಹಿಸಿ ಚಿಕಿತ್ಸೆಗಳನ್ನು ನೀಡುತ್ತಾರೆ. ಇದನ್ನು ಜನತೆ ಮೊದಲು ಮನಗಾಣಬೇಕಿದೆ ಎಂದರು.
ಸಮಾರಂಭವನ್ನು ದಕ್ಷಣ ಕನ್ನಡ ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷೆ ವಸಂತಿ ಕಿಶೋರ್ ಉದ್ಘಾಟಿಸಿದರು. ಅಮ್ಮನೆಡೆಗೆ ನಮ್ಮ ನಡೆಯ ರುವಾರಿ ಸಂದೀಪ್ ಶೆಟ್ಟಿ, ಬಜ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಝಿ ಮಥಾಯಿಸ್, ತಾ.ಪಂ.ಸದಸ್ಯೆ ಉಷಾ ಸುವರ್ಣ, ಜಿ.ಪಂ. ಸದಸ್ಯೆ ಶಶಿಕಲಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ, ಸ್ವಾಮಿ ವಿವೆಕಾನಂದ ಸೇವಾ ಸಂಸ್ಥೆಯ ಟ್ರಸ್ಟಿ ಮತ್ತು ಬಜ್ಪೆ ಗ್ರಾಮ ಪಂಚಾಯತ್ ಸದಸ್ಯೆ ಸುಮಾ ಶೆಟ್ಟಿ, ಎ.ಬಿ. ಶೆಟ್ಟಿ ದಂತ ವಿಭಾಗದ ಮುಖ್ಯಸ್ಥೆ ಡಾ. ಶಾಕಿರಾ, ಎ.ಬಿ. ಶೆಟ್ಟಿ ದಂತ ವಿಭಾಗದ ಸಾರ್ವ್ಜನಿಕ ಸಂಪರ್ಕಾಧಿಕಾರಿ ವೆಂಕಟರಮಣ ಗಟ್ಟಿ, ಹೋಲಿ ಫ್ಯಾಮಿಲಿ ಹೈಸ್ಕೂಲ್‌ನ ಮುಖ್ಯಸ್ಥೆ ಲೊಲಿತಾ ಮೊದಲಾದವರು ಉಪಸ್ಥಿತರಿದ್ದರು.

Bajpe-01041702

Comments

comments

Comments are closed.

Read previous post:
Kinnigoli-01041701
ಗುತ್ತಕಾಡು: ಬಯಲು ರಂಗ ಮಂಟಪ ಉದ್ಘಾಟನೆ

ಕಿನ್ನಿಗೋಳಿ : ಗುತ್ತಕಾಡು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 1.50 ಲಕ್ಷ ಜಿ.ಪಂ. ಅನುದಾನದಲ್ಲಿ ಬಯಲು ರಂಗ ಮಂಟಪದ ಉದ್ಘಾಟನೆಯನ್ನು ಶನಿವಾರ ಜಿಲ್ಲಾ ಪಂಚಾಯಿತಿ...

Close