ರಾಜ್ಯಮಟ್ಟದ ಯುವಕ ಮಂಡಲ ಪ್ರಶಸ್ತಿ

ಕಿನ್ನಿಗೋಳಿ: 2015-16ರ ಸಾಲಿನಲ್ಲಿ ಯುವಕಾರ್ಯ, ಕ್ರೀಡೆ, ಸಾಮಾಜಿಕ ಸಾಂಸ್ಕ್ರತಿಕ ಮತ್ತು ಸಮುದಾಯ ಅಭಿವ್ರದ್ದಿ ಕಾರ್ಯಕ್ರಮಗಳ ಮೂಲಕ ಮಾಡಿದ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ನೀಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ಪ್ರಶಸ್ತಿಯನ್ನು ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲಕ್ಕೆ ನೀಡಲಾಗಿದೆ. ರಾಜ್ಯಮಟ್ಟದಲ್ಲೂ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಿಲ್ಲಾ ಯುವ ಸಮಾವೇಶದಲ್ಲಿ ಮುಲ್ಕಿ ಮೂಡಬಿದ್ರಿ ಶಾಸಕ ಕೆ. ಅಭಯಚಂದ್ರ ಜೈನ್, ಮಂಗಳೂರು ನೆಹರೂ ಯುವ ಕೇಂದ್ರದ ಸಿಂತಿಯಾ ಲೋಬೋ, ವಿಷ್ಣುಮೂರ್ತಿ, ಕಟೀಲು ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಮತ್ತಿತರರ ಉಪಸ್ಥಿತಿಯಲ್ಲಿ ಜಿಲ್ಲಾ ಪ್ರಶಸ್ತಿಯನ್ನು ವಿತರಿಸಲಾಯಿತು.

Kinnigoli-01041701

Comments

comments

Comments are closed.

Read previous post:
ಕೆರೆಕಾಡು ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ, ಎ. ಜೆ, ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಮಂಗಳೂರು , ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಎಪ್ರಿಲ್...

Close