ಜಾಮಿಯಾ ಮೊಹಲ್ಲಾದಲ್ಲಿ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ಸ್ವಚ್ಚತೆ ಕಾರ್ಯ ಪ್ರತಿಯೊಬ್ಬರ ಕರ್ತವ್ಯ. ಪರಿಸರ ಸ್ವಚ್ಚವಾಗಿಡಲು ನಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯೊಂದಿಗೆ ಕೈಜೋಡಿಸಿದಾಗ ಸಾಮೂಹಿಕ ಸ್ವಚ್ಚತಾ ಅಭಿಯಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದಂತಾಗುತ್ತದೆ ಎಂದು ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ಅಬ್ದುಲ್ ಮನ್ನಾ ವಾಹಿದ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ವತಿಯಿಂದ ಬೆಳ್ಳಾಯರು ಕೆರೆಕಾಡು ಜಾಮಿಯಾ ಮೊಹಲ್ಲಾದಲ್ಲಿ ನಡೆದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ. ಜಿ. ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಗ್ರಾಮೀಣ ಭಾಗದಲ್ಲಿರುವ ಕಾಳಜಿಯನ್ನು ನಗರವಾಸಿಗಳು ಅನುಸರಿಸುತ್ತಿಲ್ಲ, ಸ್ವಯಂ ಪ್ರೇರಣೆಯಿಂದ ಸ್ವಚ್ಚತೆಯ ಬಗ್ಗೆ ಅರಿವು ಮೂಡಿದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.
ಬೃಹತ್ ಪರದೆಯ ಮೂಲಕ ಸ್ವಚ್ಚತಾ ಅಭಿಯಾನದ ಪ್ರಾತ್ಯಕ್ಷಿಕೆ ಹಾಗೂ ಸಾಕ್ಷ ಚಿತ್ರವನ್ನು ಪಂಚಾಯಿತಿ ವತಿಯಿಂದ ಪ್ರದರ್ಶಿಸಲಾಯಿತು. ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಾಯಿತು.
ಪಡುಪಣಂಬೂರು ಪಂಚಾಯಿತಿ ಸದಸ್ಯರಾದ ಹೇಮಂತ್ ಅಮಿನ್, ಲೀಲಾ ಬಂಜನ್, ಪುಷ್ಪಾವತಿ, ಸಂತೋಷ್‌ಕುಮಾರ್, ಧರ್ಮಗುರು ಅಬ್ದುಲ್ ಕದೀರ್, ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್, ವಿಶ್ವಬ್ಯಾಂಕ್ ಕುಡಿಯುವ ನೀರಿನ ಸಮಿತಿಯ ಅಧ್ಯಕ್ಷ ದಾಮೋದರ ಶೆಟ್ಟಿ, ಗ್ರಾಮಸ್ಥರಾದ ವಿಪುಲ್ಲ ಶೆಟ್ಟಿಗಾರ್, ರಿಯಾಜ್, ಅಬ್ದುಲ್ ಹಸನ್, ಮೊಹಮ್ಮದ್ ಹನೀಫ್, ಫೈಜಲ್, ಮಕ್ಬೂಲ್, ಪಂಚಾಯಿತಿ ಕಾರ್ಯದರ್ಶಿ ಲೋಕನಾಥ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯಿತಿ ಸದಸ್ಯ ಹೇಮಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01041702

Comments

comments

Comments are closed.

Read previous post:
Bajpe-01041702
ಉಚಿತ ದಂತಚಿಕಿತ್ಸಾ ಶಿಬಿರ

ಬಜ್ಪೆ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ಕಿನ್ನೋಳಿ, ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ದಂತಚಿಕಿತ್ಸಾ ಶಿಬಿರವು ಬಜ್ಪೆಯ...

Close