ಕಿಂಡಿಅಣೆಕಟ್ಟಿಗೆ ಶಂಕುಸ್ಥಾಪನೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಸರಕಾರಿ ಯೋಜನೆಗಳೊಂದಿಗೆ ಹಾಗೂ ಅತ್ಯಗತ್ಯವಾದ ಯೋಜನೆಗಳನ್ನು ತ್ವರಿತವಾಗಿ ತಮ್ಮ ಗ್ರಾಮಕ್ಕೆ ಸೇವಾ ಮನೋಭಾವನೆಯೊಂದಿಗೆ ಪೂರೈಸಿದಾಗ ಅಂತಹ ಸಂಸ್ಥೆಗಳಿಗೆ ಗ್ರಾಮಸ್ಥರು ಆಸರೆ ಆಗುತ್ತಾರೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು.
ಹಳೆಯಂಗಡಿ ಬಳಿಯ ತೋಕೂರು ಯುವಕ ಸಂಘದ ಸುವರ್ಣ ಮಹೋತ್ಸವದ ಯೋಜನೆಯಲ್ಲಿ ವಿವಿಧ ಸಂಸ್ಥೆಗಳ ಜಂಟಿ ಸಂಯೋಜನೆಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಕಿಂಡಿಅಣೆಕಟ್ಟಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಮೋಹನ್ ದಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮಗಾಂಧಿಉದ್ಯೋಗ ಖಾತರಿ ಯೋಜನೆಯ ಮೂಲಕ ಯೋಜನೆಯನ್ನು ಅಭಿವೃದ್ಧಿ ಪಡಿಸಲು ಪಂಚಾಯಿತಿ ಸದಾ ಸಂಪೂರ್ಣ ಸಹಕಾರ ನೀಡಲಿದೆ ಇಂತಹ ಮಹತ್ವಾಕಾಂಕ್ಷಿ ಯೋಜನೆಗೆ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ತಾ.ಪಂ. ಸದಸ್ಯ ದಿವಾಕರ ಕರ್ಕೇರ ಮಾತನಾಡಿ ಗ್ರಾಮದ ಅಂತರ್ಜಲ ವೃದ್ಧಿ ಮತ್ತು ಜಲ ಸಂರಕ್ಷಣೆಯ ಮೂಲಕ ಗ್ರಾಮದ ಕುಡಿಯುವ ನೀರಿನ ಬವಣೆ ನೀಗಿಸುವ ಬಗ್ಗೆ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದರು.
ತೋಕೂರು ಯುವಕ ಸಂಘದ ಸುವರ್ಣ ಮಹೋತ್ಸವ ಸಮಿತಿ ಮತ್ತು ಮಹಿಳಾ ಮಂಡಳಿ ಹಾಗೂ ವಿಶ್ವಬ್ಯಾಂಕ್ ಕುಡಿಯುವ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಮಿತಿಯ ಜಂಟಿ ಆಶ್ರಯದಲ್ಲಿ ಕಿಂಡಿಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ.

ಪಡುಪಣಂಬೂರು ಗ್ರಾ. ಪಂ. ಸದಸ್ಯರಾದ ಹೇಮಂತ್ ಅಮೀನ್, ಸಂತೋಷ್‌ಕುಮಾರ್, ದಿನೇಶ್ ಕುಲಾಲ್, ಲೀಲಾ ಬಂಜನ್, ಸಂಪಾವತಿ, ಪುಷ್ಪ, ವನಜಾ, ವಿಶ್ವಬ್ಯಾಂಕ್ ಕುಡಿಯುವ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಮಿತಿಯ ದಾಮೋದರ ಶೆಟ್ಟಿ , ಪಿ.ಸಿ.ಕೋಟ್ಯಾನ್, ಟಿ.ಜಿ.ಭಂಡಾರಿ, ರಮೇಶ್ ದೇವಾಡಿಗ, ಯುವಕ ಸಂಘದ ಸ್ಥಾಪಕ ಸದಸ್ಯರಾದ ಎಲ್.ಕೆ.ಸಾಲ್ಯಾನ್, ಸುಂದರ ಸಾಲ್ಯಾನ್, ಹಿಂದೂ ಜಾಗರಣ ವೇದಿಕೆಯ ಲೋಕನಾಥ್, ಧ.ಗ್ರಾ.ಯೋಜನಾ ಒಕ್ಕೂಟದ ಕರುಣಾಕರ ಶೆಟ್ಟಿಗಾರ್, ಗ್ರಾಮಸ್ಥರಾದ ವಿನೋದ್‌ಕುಮಾರ್, ವಿಜಯಕುಮಾರ್ ರೈ, ಸುಂದರ ಭಂಡಾರಿ, ಸುಬ್ರಹ್ಮಣ್ಯರಾವ್, ಪುರುಷೋತ್ತಮ ರಾವ್, ಮಧುಸೂದನ್ ಭಟ್, ಪದ್ಮನಾಭ, ಪ್ರಶಾಂತ್‌ಕುಮಾರ್ ಬೇಕಲ್, ಶೀನ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು, ಮಹಿಳಾ ಸಂಘದ ಅಧ್ಯಕ್ಷೆ ವಿನೋದಾ ಭಟ್ ವಂದಿಸಿದರು.

Kinnigoli-01041703

Comments

comments

Comments are closed.

Read previous post:
Kinnigoli-01041702
ಜಾಮಿಯಾ ಮೊಹಲ್ಲಾದಲ್ಲಿ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ಸ್ವಚ್ಚತೆ ಕಾರ್ಯ ಪ್ರತಿಯೊಬ್ಬರ ಕರ್ತವ್ಯ. ಪರಿಸರ ಸ್ವಚ್ಚವಾಗಿಡಲು ನಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯೊಂದಿಗೆ ಕೈಜೋಡಿಸಿದಾಗ ಸಾಮೂಹಿಕ ಸ್ವಚ್ಚತಾ ಅಭಿಯಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದಂತಾಗುತ್ತದೆ ಎಂದು ಮೆಸ್ಕಾಂ ಸಲಹಾ...

Close